National

ಖರ್ಚಿಲ್ಲದೆ ಅಬುದಾಭಿಗೆ ಹೋಗಿ ಬಂದ

ಮುಂಬೈ : ವಿಮಾನಗಳಿಗೆ ಲಗೇಜ್‌ ತುಂಬುವ ಲೋಡರ್‌ ಓರ್ವ ಖರ್ಚೇ ಮಾಡದೇ ಅಬುಧಾಬಿಗೆ ಹೋಗಿ ಬಂದಿದ್ದಾನೆ. ಮುಂಬೈನಿಂದ ಅಬುದಾಭಿಗೆ ಹೊರಟಿದ್ದ ಇಂಡಿಗೋ ಲೋಡರ್‌ ವಿಮಾನಕ್ಕೆ ಓರ್ವ ಲಗೇಜ್‌ ತುಂಬಿಸಲೆಂದು ಫ್ಲೈಟ್‌ ಕಂಪಾರ್ಟ್‌ಮೆಂಟ್‌ಗೆ ತೆರಳಿ ಅಲ್ಲಿಯೇ ಮಲಗಿ ಬಿಟ್ಟಿದ್ದಾನೆ. ಇದನ್ನು ಅರಿಯದ ಪೈಲಟ್‌ ಡೋರ್‌ ಲಾಕ್‌ ಮಾಡಿ ವಿಮಾನ ಹಾರಿಸಿದ್ದಾನೆ.

ಅಬುಧಾಬಿಯಲ್ಲಿ ವಿಮಾನ ಲ್ಯಾಂಡ್‌ ಆದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಲೋಡರ್‌ ಆರೋಗ್ಯಕರವಾಗಿದ್ದ ಮತ್ತು ಯಾವುದೇ ತೊಂದರೆಗಳು ಇಲ್ಲದಿದ್ದ ಕಾರಣ ಅವನನ್ನು ಅದೇ ವಿಮಾನದಲ್ಲಿ ವಾಪಸ್‌ ಕಳುಹಿಸಿಕೊಡಲಾಗಿದೆ.

Share Post