ಜೋರಾಯ್ತು ದಲಿತ ಸಿಎಂ ಚರ್ಚೆ!; ದೆಹಲಿ ಮಾತುಕತೆ ಏನು..?
ಬೆಂಗಳೂರು; ಮುಡಾ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟ ಹೆಚ್ಚಾಗುತ್ತಿದೆ.. ಪ್ರಕರಣದಲ್ಲಿ ಇಡಿ ಮಧ್ಯಪ್ರವೇಶ ಮಾಡುತ್ತಿರುವುದರಿಂದ ಮುಂದೆ ಎಂತಹ ಪರಿಸ್ಥಿತಿಗಳು ಎದುರಾಗುತ್ತವೋ ಗೊತ್ತಿಲ್ಲ.. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಸಾಕಷ್ಟು ರಾಜಕೀಯ ಬೆಳವಣಿಗೆಗಳು ನಡೆಯುತ್ತಿವೆ.. ಇಷ್ಟೆಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ.. ಇದಕ್ಕೆ ಕಾರಣ ಜಿ.ಪರಮೇಶ್ವರ್, ಮಹದೇವಪ್ಪ ಹಾಗೂ ಸತೀಶ್ ಜಾರಕಿಹೊಳಿ ಸಕ್ರಿಯರಾಗಿರುವುದು.. ಇವರು ಮೀಟಿಂಗ್ ಕೂಡಾ ಮಾಡಿರುವುದರಿಂದ ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದೆ..
ಈ ನಡುವೆ ಸತೀಶ್ ಜಾರಕಿಹೊಳಿ ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುರ್ನ ಖರ್ಗೆ ಹಾಗೂ ವೇಣುಗೋಪಾಲ್ ಅವರನ್ನು ಭೇಟಿಯಾಗಿ ಬಂದಿದ್ದಾರೆ.. ಇನ್ನು ಶೀಘ್ರದಲ್ಲೇ ವೇಣುಗೋಪಾಲ್ ಅವರು ರಾಜ್ಯ ಭೇಟಿ ನೀಡಲಿದ್ದಾರೆ.. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಕೂಡಾ ಸಿದ್ದರಾಮಯ್ಯ ಬದಲಾದರೆ ನಾನೇ ಮುಂದಿನ ಸಿಎಂ ಆಗುತ್ತೇನೆ ಎಂಬ ಹುಮ್ಮಸ್ಸಿನಲ್ಲಿದ್ದಂತೆ ಕಾಣುತ್ತಿದೆ.. ಆದ್ರೆ ಸತೀಶ್ ಜಾರಕಿಹೊಳಿ ಪದೇ ಪದೇ ದೆಹಲಿ ಅಂಗಳಕ್ಕೆ ಹೋಗಿ ಬರುತ್ತಿರುವುದರಿಂದ ಸಾಕಷ್ಟು ಕೂತೂಹಲಕ್ಕೆ ಕಾರಣವಾಗುತ್ತಿದೆ..
ಸತೀಶ್ ಜಾರಕಿಹೊಳಿ ಸಾಕಷ್ಟು ಪ್ರಾಬಲ್ಯ ಹೊಂದಿರುವ ರಾಜಕಾರಣಿ.. ಜೊತೆಗೆ 20-30 ಶಾಸಕರು ಯಾವಾಗ ಬೇಕಾದರೂ ಅವರ ಪರ ನಿಲ್ಲುತ್ತಾರೆ.. ಇತ್ತ ಸಿದ್ದರಾಮಯ್ಯ ಕೂಡಾ ಸತೀಶ್ ಜಾರಕಿಹೊಳಿ ಅಂದ್ರೆ ಆಯ್ತು ಎನ್ನುತ್ತಾರೆ.. ಹೀಗಾಗಿ ಸಿದ್ದರಾಮಯ್ಯ ಸೀಟು ಬಿಟ್ಟುಕೊಡುವುದಾದರೆ ಸತೀಶ್ ಜಾರಕಿಹೊಳಿ ಸಿಎಂ ಆಗಬಹುದೇ ಎಂಬ ವಿಚಾರ ಈಗ ಮುನ್ನೆಲೆಗೆ ಬಂದಿದೆ.. ಪರಿಸ್ಥಿತಿಗಳು, ಬೆಳವಣಿಗೆಗಳು ನೋಡುತ್ತಿದ್ದರೆ ಅದೇ ರೀತಿ ಕಾಣುತ್ತಿದೆ..
ಇನ್ನೊಂದೆಡೆ ಮಲ್ಲಿಕಾರ್ಜುನ ಖರ್ಗೆಯವರೇ ಸಿಎಂ ಆಗುತ್ತಾರೆ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.. ಸತೀಶ್ ಜಾರಕಿಹೊಳಿ ದೆಹಲಿಗೆ ಹೋಗುವುದಕ್ಕೂ ಮೊದಲು ದಲಿಯ ನಾಯಕರ ಜೊತೆ ಗೌಪ್ಯ ಸಭೆ ನಡೆಸಿದ್ದಾರೆ.. ಹೀಗಾಗಿ ಅಂದು ಏನು ಚರ್ಚೆಯಾಯಿತು.. ದೆಹಲಿಯಲ್ಲಿ ಗಂಟೆಗಟ್ಟಲೆ ಖರ್ಗೆ ಜೊತೆ ಏನು ಚರ್ಚೆ ಮಾಡಲಾಯಿತು ಅನ್ನೋದು ಇನ್ನೂ ನಿಗೂಢವಾಗಿಯೇ ಇದೆ.. ಇದೇ 18ಕ್ಕೆ ವೇಣುಗೋಪಾಲ್ ಅವರು ಬೆಂಗಳೂರಿಗೆ ಬರಲಿದ್ದು, ಅಂದು ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ..