ಲೋಕಸಭಾ ಚುನಾವಣೆ ವೇಳಾಪಟ್ಟಿ; ಸಂಪೂರ್ಣ ವಿವರ ಇಲ್ಲಿದೆ
ಒಟ್ಟು ಏಳು ಹಂತಗಳಲ್ಲಿ ಲೋಕಸಭಾ ಚುನಾವಣೆಯ ಮತದಾನ ನಡೆಯಲಿದೆ. ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಏಪ್ರಿಲ್ 26 ಹಾಗೂ ಮೇ 7 ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ ಜೂನ್ 4ರಂದು ಮತ ಎಣಿಕೆ, ಫಲಿತಾಂಶ ಪ್ರಕಟವಾಗಲಿದೆ.
ಏಳು ಹಂತಗಳಲ್ಲಿ ನಡೆಯುವ ಮತದಾನದ ವಿವರ
ಮೊದಲ ಹಂತದ ಮತದಾನ ದಿನಾಂಕ: ಏಪ್ರಿಲ್ 19 (21 ರಾಜ್ಯಗಳು 102 ಸ್ಥಾನಗಳು)
ಎರಡನೇ ಹಂತದ ಮತದಾನ ದಿನಾಂಕ: ಏಪ್ರಿಲ್ 26 (13 ರಾಜ್ಯಗಳು, 89 ಸ್ಥಾನಗಳು)
ಮೂರನೇ ಹಂತದ ಮತದಾನ ದಿನಾಂಕ: ಮೇ 7 (12 ರಾಜ್ಯಗಳು, 94 ಸ್ಥಾನಗಳು)
ನಾಲ್ಕನೇ ಹಂತದ ಮತದಾನದ ದಿನಾಂಕ: ಮೇ 13 (10 ರಾಜ್ಯಗಳು, 96 ಸ್ಥಾನಗಳು)
ಐದನೇ ಹಂತದ ಮತದಾನ ದಿನಾಂಕ: ಮೇ 20 (8 ರಾಜ್ಯಗಳು, 49 ಸ್ಥಾನಗಳು)
ಆರನೇ ಹಂತದ ಮತದಾನದ ದಿನಾಂಕ: ಮೇ 25 (7 ರಾಜ್ಯಗಳು, 57 ಸ್ಥಾನಗಳು)
ಏಳನೇ ಹಂತದ ಮತದಾನದ ದಿನಾಂಕ: ಜೂನ್ 1 (8 ರಾಜ್ಯಗಳು, 57 ಸ್ಥಾನಗಳು)
ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ
ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದೆ
ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ
ಏಪ್ರಿಲ್ 26 ರಂದು ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ
ಮೇ 7 ರಂದು ರಾಜ್ಯದಲ್ಲಿ ಎರಡನೇ ಹಂತದ ಚುನಾವಣೆ
ದೇಶದಲ್ಲಿ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದೆ
ಯಾವ ರಾಜ್ಯದಲ್ಲಿ ಎಷ್ಟು ಹಂತಗಳಲ್ಲಿ ಮತದಾನ..?
===================================
– ಒಂದೇ ಹಂತದಲ್ಲಿ 22 ರಾಜ್ಯಗಳಲ್ಲಿ ಮತದಾನ
– ಎಪಿ, ತೆಲಂಗಾಣ, ಅರುಣಾಚಲ, ದೆಹಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ,
– ಕೇರಳ, ತಮಿಳುನಾಡು, ಪಂಜಾಬ್, ಉತ್ತರಾಖಂಡ, ಸಿಕ್ಕಿಂ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್, ಪುದುಚೇರಿ,
– ಚಂಡೀಗಢ, ಲಕ್ಷದ್ವೀಪ, ದಾದ್ರಾನಗರ ಹವೇಲಿ, ಅಂಡಮಾನ್ ನಿಕೋಬಾರ್‌ನಲ್ಲಿ ಏಕ ಹಂತದ ಮತದಾನ
– ಕರ್ನಾಟಕ, ರಾಜಸ್ಥಾನ, ತ್ರಿಪುರ ಮತ್ತು ಮಣಿಪುರದಲ್ಲಿ ಎರಡು ಹಂತಗಳಲ್ಲಿ ಚುನಾವಣೆ
– ಅಸ್ಸಾಂ ಮತ್ತು ಛತ್ತೀಸ್‌ಗಢದಲ್ಲಿ 3 ಹಂತಗಳಲ್ಲಿ ಮತದಾನ
– ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್‌ನಲ್ಲಿ 4 ಹಂತಗಳಲ್ಲಿ ಮತದಾನ
– ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ಹಂತಗಳಲ್ಲಿ ಮತದಾನ
– ಉತ್ತರ ಪ್ರದೇಶ, ಬಿಹಾರ, ಬಂಗಾಳದಲ್ಲಿ 7 ಹಂತಗಳಲ್ಲಿ ಮತದಾನ
ಚುನಾವಣಾ ಆಯುಕ್ತರು ಹೇಳಿದ್ದೇನು..?
96.8 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಲು ಅರ್ಹ
1.82 ಕೋಟಿ ಹೊಸ ಮತದಾರರು ಈ ಬಾರಿ ಮತದಾನಕ್ಕೆ ಅವಕಾಶ ಪಡೆದುಕೊಂಡಿದ್ದಾರೆ
10.5 ಲಕ್ಷ ಮತಗಟ್ಟೆಯಲ್ಲಿ ಈ ಬಾರಿ ಪ್ರಜಾಪ್ರಭುತ್ವ ಹಬ್ಬ
1.5 ಕೋಟಿ ಅಧಿಕಾರಿಗಳು ಚುನಾವಣಾ ಪ್ರಕ್ರಿಯಲ್ಲಿ ಪಾಲ್ಗೊಳ್ಳುತ್ತಾರೆ
88.4 ಲಕ್ಷ ವಿಕಲಚೇತನ ಮತದಾರರಿದ್ದಾರೆ
48 ಸಾವಿರ ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ
ಒಟ್ಟು 55 ಲಕ್ಷ ಇವಿಎಂಗಳನ್ನು ಮತದಾನಕ್ಕೆ ಬಳಸಲಾಗುತ್ತಿದೆ
49.7 ಕೋಟಿ ಪುರುಷ ಮತದಾರರಿದ್ದಾರೆ
47.1 ಕೋಟಿ ಮಹಿಳಾ ಮತದಾರರಿದ್ದಾರೆ
85 ವರ್ಷ ಮೇಲ್ಪಟ್ಟ ಮತದಾರರು 82 ಲಕ್ಷ ಮಂದಿ ಇದ್ದಾರೆ
19.74 ಕೋಟಿ ಯುವ ಮತದಾರರಿದ್ದಾರೆ
12 ರಾಜ್ಯಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ
2.18 ಲಕ್ಷ ಶತಾಯುಷಿಗಳು ಈ ಬಾರಿ ಮತ ಚಲಾಯಿಸಲಿದ್ದಾರೆ
80 ವರ್ಷ ಮೇಲ್ಪಟ್ಟ ಮತದಾರರನ್ನು ಕರೆತರಲು ಸೂಕ್ತ ವ್ಯಸ್ಥೆ
2100 ವೀಕ್ಷಕರು ಸೂಕ್ಷ್ಮ ಮತಗಟ್ಟೆಗಳಲ್ಲಿ ಹದ್ದಿನ ಕಣ್ಣಿಡಲಿದ್ದಾರೆ
40 ಪರ್ಸೆಂಟ್‌ಗಿಂತ ಹೆಚ್ಚು ಊನವಾಗಿರುವ ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ವ್ಯವಸ್ಥೆ
ಚುನಾವಣೆ ಮುಗಿಯುವವರೆಗೂ ಸೂರ್ಯಾಸ್ತದ ನಂತರ ATM ವಾಹನಗಳ ಓಡಾಡುವಂತಿಲ್ಲ
ಸಾಮಾಜಿಕ ಜಾಲತಾಣಗಳು ಮೇಲೆ ನಾವು ಹಚ್ಚು ಗಮನ ಇಟ್ಟಿರುತ್ತೇವೆ
ಮನೆಯಿಂದಲೇ ಮತದಾನ ಮಾಡಲು ಮೊದಲೇ ನೋಂದಾಯಿಸಿಕೊಳ್ಳಬೇಕು
ಪ್ರತಿಯೊಂದು ಚುನಾವಣೆಯೂ ನಮಗೆ ಪರೀಕ್ಷೆ ಇದ್ದಂತೆ
ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು ನಾವು ಸನ್ನದ್ಧರಾಗಿದ್ದೇವೆ