Politics

ಡಿಕೆಶಿ ಜೊತೆ ಸವದಿ ಸಂಪರ್ಕದಲ್ಲಿದ್ದಾರೆ; ಲಖನ್‌ ಜಾರಕಿ ಹೊಳಿ ಬಾಂಬ್‌

ಬೆಳಗಾವಿ: ಬಿಜೆಪಿ ನಾಯಕ ಲಕ್ಷ್ಮಣ ಸವದಿಯವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಂಪರ್ಕದಲ್ಲಿದ್ದಾರೆ ಎಂದು ವಿಧಾನಪರಿಸತ್‌ ಸದಸ್ಯ ಲಖನ್‌ ಜಾರಕಿಹೊಳಿ ಬಾಂಬ್‌ ಸ್ಫೋಟಿಸಿದ್ದಾರೆ.

ಲಕ್ಷ್ಮಣ ಸವದಿಯವರು ಬೇರೆ ನಂಬರ್‌ನಿಂದ ಡಿ.ಕೆ.ಶಿವಕುಮಾರ್‌ ಅವರಿಗೆ ಕರೆ ಮಾತನಾಡಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿದ್ದಾರೆ. ಅವರು ಯಾವ ನಂಬರ್‌ನಿಂದ ಕರೆ ಮಾಡಿದ್ದಾರೆ ಎಂಬುದು ನನಗೆ ಗೊತ್ತಿದೆ. ಆ ನಂಬರ್‌ ನನ್ನ ಬಳಿ ಇದೆ ಎಂದು ಲಖನ್‌ ಜಾರಕಿಹೊಳಿ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್‌ ಜೊತೆ ಸೋತವರೇ ಹೆಚ್ಚು ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಸೇರುವ ಬಗ್ಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಲಖನ್‌ ಬಾಂಬ್‌ ಸಿಡಿಸಿದ್ದಾರೆ.

Share Post