CrimeDistricts

ಬಸ್‌ ಡಿಕ್ಕಿ ಹೊಡೆದ ರಭಸಕ್ಕೆ 30 ಅಡಿ ಹಾರಿದ ಬೈಕ್‌ ಸವಾರ; ಬಸ್‌ ಕೂಡ ಪಲ್ಟಿ!

ಬೆಳಗಾವಿ; ವೇಗವಾಗಿ ಬರುತ್ತಿದ್ದ ಸರ್ಕಾರಿ ಬಸ್‌ ಬೈಕ್‌ಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್‌ ಸವಾರ 30 ಅಡಿ ಮೇಲೆ ಹಾರಿ ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ.. ಇದೇ ವೇಳೆ ಚಾಲಕ ಸಡನ್‌ ಬ್ರೇಕ್‌ ಹಾಕಿದ್ದರಿಂದ ಬಸ್‌ ಪಲ್ಟಿ ಹೊಡೆದಿದೆ.. ಬೆಳಗಾವಿ ಬಳಿಯ  ಖನಗಾಂವ ಗ್ರಾಮದ  ಕೆ.ಎಚ್.ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ..

ಸುಳೇಬಾವಿ ಗ್ರಾಮದ ವಿಠ್ಠಲ ದತ್ತಾ ಲೋಕರೆ(29) ಎಂಬ ಬೈಕ್‌ ಸವಾರ ಸಾವನ್ನಪ್ಪಿದ್ದಾನೆ.. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.. ಸರ್ಕಾರಿ ಬಸ್‌ ಬೆಳಗಾವಿಗೆ ಬರುತ್ತಿತ್ತು.. ಬೈಕ್‌ ಸವಾರ ಬೆಳಗಾವಿ ಕಡೆಯಿಂದ ಬರುತ್ತಿದ್ದ.. ಇಬ್ಬರೂ ವೇಗವಾಗಿ ಬರುತ್ತಿದ್ದರು ಎಂದು ತಿಳಿದುಬಂದಿದೆ.. ಬಸ್‌ ಡಿಕ್ಕಿ ಹೊಡೆಯುತ್ತಿದ್ದಂತೆ ಬೈಕ್‌ ಸವಾರ 30 ಅಡಿಗೂ ಮೇಲೆ ಹಾರಿದ್ದಾನೆ.. ನಂತರ ಆತನ ದೇಹ ಪಕ್ಕದ ಹೊಲದಲ್ಲಿ ಬಿದ್ದಿದೆ.. ಬಿದ್ದ ಫೋರ್ಸ್‌ಗೆ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾಎ..

ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ..

 

Share Post