Politics

ಮತಾಂತರ ನಿಷೇಧ ಕಾಯ್ದೆಗೆ ಸಂಪುಟ ಒಪ್ಪಿಗೆ; ನಾಳೆ ಮಂಡನೆ..?

ಬೆಳಗಾವಿ: ವ್ಯಾಪಕ ಚರ್ಚೆಯಲ್ಲಿದ್ದ ಮತಾಂತರ ನಿಷೇಧ ಕಾಯ್ದೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನಾಳೆ ಸದನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ. ಈ ಮೊದಲು ಸಿದ್ಧಪಡಿಸಲಾಗಿದ್ದ ಕರಡಿನಲ್ಲಿ ಕೆಲವು ಬದಲಾವಣೆ ಮಾಡಿ ಕರ್ನಾಟಕ ಮತಾಂತರ ನಿಷೇಧ ವಿಧೇಯಕವನ್ನು ಮಂಡಿಸಲು ಸಂಪುಟದಲ್ಲಿ ತೀರ್ಮಾನಿಸಲಾಗಿದೆ.

ಬಲವಂತವಾಗಿ ಅಥವಾ ಯಾವುದಾದರೂ ಆಮಿಷವೊಡ್ಡಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರಿಸಬಾರದು ಎಂಬುದು ಈ ವಿಧೇಯಕದ ಮುಖ್ಯ ಅಂಶ.  ಸ್ವ ಇಚ್ಛೆಯಿಂದ ಮತಾಂತರನಾಗುವ ವ್ಯಕ್ತಿ 2 ತಿಂಗಳ ಮೊದಲೇ ಸಕ್ಷಮ್ಯ ಪ್ರಾಧಿಕಾರದ ಎದುರು ಅರ್ಜಿ ಸಲ್ಲಿಸಬೇಕಾಗುತ್ತದೆ. ಇನ್ನೊಂದೆಡೆ ಬಲತ್ಕಾರದ ಮತಾಂತರ ಮಾಡುವ ವ್ಯಕ್ತಿ ಹಾಗೂ ಸಂಘಟನೆಯನ್ನು ಬಂಧಿಸಲು ಅವಕಾಶ ನೀಡಲಾಗಿದೆ. ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಈ ಮತಾಂತರ ಕಾರ್ಯ ಮಾಡುವಂತಿಲ್ಲ.

ಸ್ವಇಚ್ಛೆ ಮತಾಂತರವಾದರೂ ತಟಸ್ಥ ಸ್ಥಳದಲ್ಲಿ ಕಾನೂನಾತ್ಮಕವಾಗಿ ಮಾಡಬೇಕಾಗುತ್ತದೆ. ಬಲಾತ್ಕಾರ ಮತಾಂತರದಲ್ಲಿ ಪಾಲ್ಗೊಂಡವರಿಗೆ 1 ರಿಂದ 3 ವರ್ಷ ಜೈಲು ಹಾಗೂ ದಂಡವನ್ನು ವಿಧಿಸುವುದು ಈ ವಿಧೇಯಕದಲ್ಲಿ ಒಳಗೊಂಡಿದೆ.ಪರವಿರೋಧದ ನಡುವೆ ಈ ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ ನೀಡಿದ್ದು ನಾಳೆ ಸದನದಲ್ಲಿ ಅನುಮೋದನೆಯಾಗುವ ಸಾಧ್ಯತೆ ದಟ್ಟವಾಗಿದೆ.

Share Post