Politics

Election Bonds; ಚುನಾವಣಾ ಬಾಂಡ್‌ಗಳು ಅಸಂವಿಧಾನಿಕ; ಸುಪ್ರೀಂ ಮಹತ್ವದ ಆದೇಶ!

ನವದೆಹಲಿ; ರಾಜಕೀಯ ಪಕ್ಷಗಳಿಗೆ ನಿಧಿ ನೀಡುವುದಕ್ಕಾಗಿ ಖರೀದಿಸುವ ಚುನಾವಣಾಬಾಂಡ್‌ಗಳು ಅಸಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ ಕೊಟ್ಟಿದೆ. ಚುನಾವಭಾ ಬಾಂಡ್‌ ಯೋಜನೆ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿರುವ ಕೋರ್ಟ್‌, ಇಂತಹದ್ದೊಂದು ಮಹತ್ವದ ತೀರ್ಪು ಪ್ರಕಟಿಸಿದೆ. ಚುನಾವಣಾ ಬಾಂಡ್‌ಗಳನ್ನು ನಿಷೇಧಿಸಿ ಆದೇಶ ಹೊರಡಿಸಿರುವ ಕೋರ್ಟ್‌, ಈ ಪ್ರಕ್ರಿಯೆಯನ್ನೇ ಅಸಂವಿಧಾನಿಕೆ ಎಂದು ಹೇಳಿದೆ. ಜೊತೆಗೆ ಇದರ ಬದಲಾಗಿ ಬೇರೆ ಆಯ್ಕೆಯ ಬಗ್ಗೆ ಯೋಚನೆ ಮಾಡುವಂತೆಯೂ ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಟ್ಟಿದೆ.

ಇದನ್ನೂ ಓದಿ; Train; ಈ ಊರಿನ ಜನ ದಿನಾ ಟಿಕೆಟ್‌ ಖರೀದಿಸ್ತಾರೆ, ಆದ್ರೆ ಟ್ರೈನ್‌ ಹತ್ತೋದೇ ಇಲ್ಲ!

ಪಕ್ಷಗಳಿಗೆ ಬರುವ ಹಣದ ಮೂಲ ಮುಖ್ಯ;

ರಾಜಕೀಯ ಪಕ್ಷಗಳು ಯಾರಿಂದ ಹಣ ಪಡೆಯುತ್ತಿವೆ. ಯಾವ ರೂಪದಲ್ಲಿ ಹಣ ಪಡೆಯುತ್ತಿವೆ ಎಂದು ಮುಖ್ಯವಾಗುತ್ತದೆ. ಚುನಾವಣಾ ಬಾಂಡ್‌ಗಳ ಮೂಲಕ ಹಣದ ಮೂಲವನ್ನು ಮುಚ್ಚಿಡಲಾಗುತ್ತಿದೆ. ಹೀಗಾಗಿ ಚುನಾವಣಾ ಬಾಂಡ್‌ ಯೋಜನೆಯೇ ಕಾನೂನು ಬಾಹಿರ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ಚುನಾವಣಾ ಬಾಂಡ್‌ಗಳು ಮಾಹಿತಿ ಹಕ್ಕಿನ ಉಲ್ಲಂಘನೆಗೆ ಕಾರಣವಾಗುತ್ತವೆ ಎಂದೂ ಸುಪ್ರೀಂ ಕೋರ್ಟ್‌ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾ.ಸಂಜೀವ್ ಖನ್ನಾ, ನ್ಯಾ.ಬಿ.ಆರ್. ಗವಾಯಿ, ನ್ಯಾ.ಜೆ.ಬಿ.ಪರ್ದಿವಾಲಾ ಮತ್ತು ನ್ಯಾ. ಮನೋಜ್ ಮಿಶ್ರಾ ಅವರಿದ್ದ ಪೀಠ ಸರ್ವಾನುಮತದಿಂದ ಈ ತೀರ್ಪು ಪ್ರಕಟ ಮಾಡಿದೆ.

ಇದನ್ನೂ ಓದಿ; NASA; ಭೂಮಿಯಂತಹ ಮತ್ತೊಂದು ಗ್ರಹ ಪತ್ತೆ ಮಾಡಿದ ನಾಸಾ; ಸೂಪರ್ ಅರ್ಥ್ ಎಷ್ಟು ದೂರ?

ಯಾರು ಚುನಾವಣಾ ಬಾಂಡ್‌ ಖರೀದಿಸಬಹುದಿತ್ತು..?;

ಚುನಾವಣಾ ಬಾಂಡ್​ ಯೋಜನೆ ಪ್ರಕಾರ, ದೇಶದ ಯಾವುದೇ ಪ್ರಜೆ ಅಥವಾ ದೇಶದ ಯಾವುದೇ ಘಟಕ ಈ ಚುನಾವಣಾ ಬಾಂಡ್‌ ಖರೀದಿಸಬಹುದು. ಯಾವುದೇ ವ್ಯಕ್ತಿ ಏಕಾಂಗಿಯಾಗಿ ಅಥವಾ ಇತರ ವ್ಯಕ್ತಿಗಳ ಸಹಯೋಗದಲ್ಲೂ ಬಾಂಡ್‌ಗಳ ಖರೀದಿಗೆ ಅವಕಾಶವಿದೆ. 1951ರ ಜನತಾ ಪ್ರಾತಿನಿಧ್ಯ ಕಾಯಿದೆಯ ಸೆಕ್ಷನ್ 29(A) ಅಡಿಯಲ್ಲಿ ನೋಂದಾಯಿಸಲ್ಪಟ್ಟ ರಾಜಕೀಯ ಪಕ್ಷಗಳು ಈ ಬಾಂಡ್‌ಗಳನ್ನು ಪಡೆಯುತ್ತಿದ್ದವು. ಲೋಕಸಭೆ ಅಥವಾ ವಿಧಾನಸಭೆಗೆ ಕಳೆದ ಚುನಾವಣೆಯಲ್ಲಿ ಕನಿಷ್ಠ ಒಂದು ಶೇಕಡಾ ಮತಗಳನ್ನು ಗಳಿಸಿದ ಪಕ್ಷಗಳು ಚುನಾವಣಾ ಬಾಂಡ್‌ಗಳನ್ನು ಪಡೆಯಬಹುದಾಗಿತ್ತು. ಬಾಂಡ್‌ಗಳನ್ನು ಅಧಿಕೃತ ಬ್ಯಾಂಕ್ ಖಾತೆಯ ಮೂಲಕ ಅರ್ಹ ರಾಜಕೀಯ ಪಕ್ಷ ಎನ್‌ಕ್ಯಾಶ್ ಮಾಡಬಹುದಾಗಿತ್ತು.

ಇದನ್ನೂ ಓದಿ; Are you angry..?; ನೀವು ಶತ ಕೋಪಿಷ್ಠರಾ..?; ಹಾಗಾದ್ರೆ ಇದನ್ನು ಓದಿ ಕೂಲ್‌ ಆಗಿ..!

ಏನಿದು ಚುನಾವಣಾ ಬಾಂಡ್‌..? ಇದರ ಖರೀದಿ ಹೇಗೆ..?;

ಜನಸಾಮಾನ್ಯರು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ಒಂದು ವಿಧದ ದೇಣಿಯೇ ಚುನಾವಣಾ ಬಾಂಡ್‌.. 1,000 ರೂಪಾಯಿ, 10,000 ರೂಪಾಯಿ, 1 ಲಕ್ಷ ರೂಪಾಯಿ, 10 ಲಕ್ಷ ರೂಪಾಯಿ, 1 ಕೋಟಿ ರೂಪಾಯಿ ಇತ್ಯಾದಿ ಮುಖಬೆಲೆಗಳಲ್ಲಿ ಬಾಂಡ್​ಗಳನ್ನು ಖರೀದಿಸಲು ಅವಕಾಶವಿತ್ತು. ಈ ಬಾಂಡ್​ಗಳು ಅನಾಮಧೇಯವಾಗಿದ್ದು, ಇದನ್ನು ಖರೀದಿಸಿದ ವ್ಯಕ್ತಿ ಅಥವಾ ಸಂಸ್ಥೆಯ ಹೆಸರು ಬಹಿರಂಗ ಪಡಿಸುತ್ತಿರಲಿಲ್ಲ. ಯಾವ ರಾಜಕೀಯ ಪಕ್ಷಕ್ಕೆ ದೇಣಿಗೆ ಕೊಡಲಾಗಿದೆ ಎಂಬುದೂ ಬಹಿರಂಗವಾಗುತ್ತಿರಲಿಲ್ಲ.

ಇತ್ತೀಚಿನ ಚುನಾವಣೆಯಲ್ಲಿ ಶೇ.1ಕ್ಕೂ ಹೆಚ್ಚು ಮತ ಪಡೆದ ಯಾವುದೇ ಪಕ್ಷ ಕೂಡಾ ಎಲೆಕ್ಟ್ರೋರಲ್ ಬಾಂಡ್ ಅಕೌಂಟ್ ತೆರೆಯಬಹುದಾಗಿತ್ತು. ಎಲೆಕ್ಟೋರಲ್ ಬಾಂಡ್ ಖರೀದಿಸಿದ ಬಳಿಕ 15 ದಿನದೊಳಗೆ ಆ ಹಣವನ್ನು ಎನ್​ಕ್ಯಾಷ್ ಮಾಡ್ಕೋಬಹುದಿತ್ತು. ತಪ್ಪಿದರೆ ಆ ಹಣ ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೆ ಹೋಗುತ್ತಿತ್ತು. ಆದ್ರೆ ಇನ್ಮೇಲೆ ಇದಕ್ಕೆ ಅವಕಾಶವಿರುವುದಿಲ್ಲ.

Share Post