ಜಗನ್ ಮೋಹನ್ ರೆಡ್ಡಿ, ಮೋದಿ ಇಬ್ಬರೂ ಒಂದೇ ತಪ್ಪು ಮಾಡಿದರಾ..?
ನವದೆಹಲಿ; ಈ ಚುನಾವಣೆಯಲ್ಲಿ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಇಬ್ಬರೂ ಒಂದೇ ರೀತಿಯ ತಪ್ಪು ಮಾಡಿದರಾ..? ಅವರು ಮಾಡಿದ ತಪ್ಪಿನಿಂದಲೇ ಇಬ್ಬರಿಗೂ ಅಂದುಕೊಂಡಷ್ಟು ಸೀಟುಗಳು ಸಿಗಲಿಲ್ಲವೇ..? ಇಬ್ಬರ ಅತಿಯಾದ ಆತ್ಮವಿಶ್ವಾಸವೇ ಜಗನ್ ಪಕ್ಷದ ಹೀನಾಯ ಸೋಲಿಗೆ, ಕೇಂದ್ರದಲ್ಲಿ ಎನ್‌ಡಿಎಗೆ ಕಡಿಮೆ ಸೀಟು ಬರೋದಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆಗಳು ಎದ್ದಿವೆ…
ಲೋಕಸಭಾ ಚುನಾವಣೆ ಘೋಷಣೆಗೂ ಮೊದಲಿನಿಂದಲೂ ಎನ್‌ಡಿಎ 400 ಸೀಟುಗಳು ಬರತ್ತವೆ ಎಂದು ಮೋದಿ ಹೇಳಿಕೊಂಡು ಬಂದಿದ್ದರು.. ಇತ್ತ ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಅಲ್ಲಿನ ವಿಧಾನಸಭಾ ಚುನಾವಣೆಯಲ್ಲಿ 175 ಕ್ಕೆ 175 ಸ್ಥಾನಗಳನ್ನು ಗೆಲ್ಲೋದಾಗಿ ಹೇಳುತ್ತಿದ್ದರು.. ಇಬ್ಬರದ್ದೂ ಕೂಡಾ ಅತಿಯಾದ ಆತ್ಮವಿಶ್ವಾಸವಾಗಿತ್ತು… ಆದ್ರೆ ಲೋಕಸಭೆಯಲ್ಲಿ ಎನ್‌ಡಿಎ ಕೇವಲ 292 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.. ಇತ್ತ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿಯವ ವೈಎಸ್‌ಆರ್‌ಸಿಪಿ ಪಕ್ಷ ಕೇವಲ 13 ಸ್ಥಾನಗಳನ್ನು ಗಳಿಸಿ ಹೀನಾಯವಾಗಿ ಸೋತಿದೆ.. ಕೇಂದ್ರದಲ್ಲಿ ಎನ್‌ಡಿಎ ಸರಳ ಬಹುಮತ ಪಡೆದಿದ್ದರೂ ಕೂಡಾ ಹಲವು ಕಾರಣಗಳಿಗಾಗಿ ಬಿಜೆಪಿ ಪಕ್ಷ ಮುಖಭಂಗ ಅನುಭವಿಸಿದೆ..