ಸರ್ಕಾರ ರಚಿಸಲು ಕಸರತ್ತು ಮಾಡ್ತಿದೆಯಾ ಕಾಂಗ್ರೆಸ್..?; ರಾಹುಲ್ ಹೇಳಿದ್ದೇನು…?
ನವದೆಹಲಿ; 230ಕ್ಕೂ ಹೆಚ್ಚು ಸೀಟುಗಳನ್ನು ಪಡೆದಿರುವ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಸರ್ಕಾರ ರಚನೆಗೆ ಕಸರತ್ತು ಮಾಡುತ್ತಿದೆ ಎಂಬುದು ಸಾಬೀತಾಗಿದೆ.. ಆ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರೇ ಹಿಂಟ್ ಕೊಟ್ಟಿದ್ದಾರೆ… ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರಿಗೆ ನೀವು ವಿರೋಧ ಪಕ್ಷದಲ್ಲಿ ಕೂರುತ್ತೀರಾ ಎಂಬ ಪ್ರಶ್ನೆ ಎದುರಾಗಿತ್ತು.. ಅದಕ್ಕೆ ಉತ್ತರಿಸಿದ ಅವರು, ನಾವುನಾಳೆ ನನ್ನ ಮಿತ್ರರ ಜೊತೆ ಮಾತನಾಡಿ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದು ಹೇಳಿದರು..
ಎಲ್ಲಾ ಸಂಸ್ಥೆಗಳನ್ನು ಮೋದಿ, ಅಮಿತ್ ಶಾ ಬೆದರಿಸಿ ಇಟ್ಟುಕೊಂಡಿದ್ದರು.. ನಮ್ಮ ಅಕೌಂಟ್‌ಗಳೆಲ್ಲಾ ಸೀಜ್ ಮಾಡಿದ್ದರು.. ನಮ್ಮ ಮಿತ್ರಪಕ್ಷದ ಮುಖ್ಯಮಂತ್ರಿಯನ್ನು ಬಂಧಿಸಿದ್ದರು.. ಇದರ ನಡುವೆಯೂ ಬಡವರು, ಕೂಲಿ ಕಾರ್ಮಿಕರು, ಶ್ರಮಿಕರು, ಬುಡಕಟ್ಟು ಜನರು ನಮ್ಮ ಕೈಹಿಡಿದಿದ್ದಾರೆ.. ಈ ಮೂಲಕ ಸಂವಿಧಾನವನ್ನು ಉಳಿಸಿದ್ದಾರೆ.. ಹೀಗಾಗಿ ನಮ್ಮ ಜೊತೆ ನಾವಿರುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ..
ನಾವು ಎಲ್ಲೆಲ್ಲಿ ಒಗ್ಗಟ್ಟಾಗಿ ಹೋರಾಡಿದ್ದೇವೆ ಅಲ್ಲೆಲ್ಲಾ ಗೆದ್ದಿದ್ದೇವೆ.. ಕೆಲವು ಕಡೆ ನಾನಾ ಕಾರಣಕ್ಕಾಗಿ ಒಗ್ಗಟ್ಟು ಉಂಟಾಗಿಲ್ಲ.. ಹೀಗಾಗಿ ಸ್ವಲ್ಪ ಹಿನ್ನಡೆಯಾಗಿದೆ.. ನನ್ನ ಒಕ್ಕೂಟದವರು ಒಗ್ಗಟ್ಟಾಗಿ ಕೆಲಸ ಮಾಡಿದ್ದಾರೆ.. ಹೀಗಾಗಿ ಏನೇ ನಿರ್ಧಾರ ತೆಗೆದುಕೊಂಡರೂ ಒಕ್ಕೂಟದ ಸ್ನೇಹಿತರಿಗೆ ಹೇಳಿಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ..