ಚಿಕ್ಕಬಳ್ಳಾಪುರ; ಕಾಂಗ್ರೆಸ್ ಸೇರಿ ಇಕ್ಕಟ್ಟಿಗೆ ಸಿಲುಕಿದರಾ ಮಾಜಿ ಶಾಸಕ ಬಚ್ಚೇಗೌಡ?
ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ದಿನದಿಂದ ದಿನಕ್ಕೆ ರೋಚಕತೆ ಪಡೆದುಕೊಳ್ಳುತ್ತಿದೆ.. ಕೆಲ ನಾಯಕರು ಮಾಡುಕೊಳ್ಳುತ್ತಿರುವ ಒಂದಷ್ಟು ಎಡವಟ್ಟುಗಳು ಪ್ರತಿ ದಿನ ರಾಜಕೀಯ ಚಿತ್ರಣ ಬದಲಿಸುತ್ತಿವೆ..
ಇಕ್ಕಟ್ಟಿಗೆ ಸಿಲುಕಿದರಾ ಮಾಜಿ ಶಾಸಕ?;
ಲೋಕಸಭಾ ಚುನಾವಣೆ ಘೋಷಣೆಯಾದ ಮೇಲೆ ಮಾಜಿ ಶಾಸಕ ಬಚ್ಚೇಗೌಡ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಅತ್ಯಂತ ಸಂಭಾವಿತ ರಾಜಕಾರಣಿಯಾಗಿದ್ದರಿಂದ ಒಕ್ಕಲಿಗ ಮತಗಳು ಈ ಬಾರಿ ಕಾಂಗ್ರೆಸ್ ಪಾಲಾಗಬಹುದು ಎಂದೇ ಭಾವಿಸಲಾಗಿತ್ತು. ಆದ್ರೆ ಶಾಸಕ ಪ್ರದೀಪ್ ಈಶ್ವರ್ ಮಾಡಿದ ಒಂದೇ ಒಂದು ಎಡವಟ್ಟು ಇಲ್ಲಿನ ರಾಜಕೀಯ ಚಿತ್ರಣ ಬದಲಿಸುವಂತೆ ಮಾಡಿದೆ. ಜೊತೆಗೆ ಮಾಜಿ ಶಾಸಕ ಬಚ್ಚೇಗೌಡ ಕೂಡಾ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಬಚ್ಚೇಗೌಡ ಹೆಗಲ ಮೇಲೆ ಕೈ ಹಾಕಿದ ಪ್ರದೀಪ್ ಈಶ್ವರ್;
ಮಾಜಿ ಶಾಸಕ ಬಚ್ಚೇಗೌಡ ಹಿರಿಯ ರಾಜಕಾರಣಿ.. ಗೌರವ ಕೊಟ್ಟು, ತೆಗೆದುಕೊಳ್ಳುವ ನಾಯಕ. ಬಚ್ಚೇಗೌಡರ ಮುಂದೆ ಪ್ರದೀಪ್ ಈಶ್ವರ್ ತುಂಬಾ ಸಣ್ಣವರು. ಕೊನೇ ಗಳಿಗೆಯಲ್ಲಿ ಬಚ್ಚೇಗೌಡರು ಸಪೋರ್ಟ್ ಮಾಡದೇ ಇದ್ದಿದ್ದರೆ ಪ್ರದೀಪ್ ಈಶ್ವರ್ ಗೆಲ್ಲುತ್ತಲೂ ಇರಲಿಲ್ಲ. ಅಂತಹ ನಾಯಕನ ಮುಂದೆ ಪ್ರದೀಪ್ ಈಶ್ವರ್ ಕೈಕಟ್ಟಿ ನಿಂತು ಗೌರವ ಸೂಚಿಸಬೇಕಿತ್ತು. ಆದ್ರೆ ಮಾಧ್ಯಮಗಳ ಜೊತೆ ಮಾತನಾಡುವಾಗ ಪ್ರದೀಪ್ ಈಶ್ವರ್ ಸ್ಟೈಲ್ ಆಗಿ ಬಚ್ಚೇಗೌಡರ ಹೆಗಲೇ ಮೇಲೆ ಕೈಹಾಕಿದ್ದಾರೆ. ಇದು ಪ್ರದೀಪ್ ಈಶ್ವರ್ ಮಾಡಿಕೊಂಡ ದೊಡ್ಡ ಎಡವಟ್ಟು. ಇದರಿಂದಾಗಿ ಬಚ್ಚೇಗೌಡರ ಬೆಂಬಲಿಗರು, ಜೆಡಿಎಸ್ ಕಾರ್ಯಕರ್ತರು ರೆಬೆಲ್ ಆಗಿದ್ದಾರೆ.
ಬಚ್ಚೇಗೌಡರಿಗೆ ಈಗ ಇರಿಸು ಮುರಿಸು;
ಮಾಜಿ ಶಾಸಕ ಬಚ್ಚೇಗೌಡರು ಕಾಂಗ್ರೆಸ್ ಸೇರಿದಾಗ ಜೆಡಿಎಸ್ ಮುಖಂಡರು ಯಾರೂ ಅವರ ಜೊತೆ ಬಂದಿರಲಿಲ್ಲ. ಆದ್ರೆ ಬಚ್ಚೇಗೌಡರು ಹೇಳಿದಾಗ ಬರುವವರಿದ್ದರು. ಆದ್ರೆ ಪ್ರದೀಪ್ ಈಶ್ವರ್ ವರ್ತನೆಯಿಂದಾಗಿ ಬಚ್ಚೇಗೌಡ ಅಭಿಮಾನಿಗಳು ಬೇಸರವಾಗಿದ್ದಾರೆ. ನಿಮಗೆ ಗೌರವ ಕೊಡದವರನ್ನು ಹೇಗೆ ಬೆಂಬಲಿಸುವುದು ಎಂದು ಕೇಳುತ್ತಿದ್ದಾರೆ. ಇದರಿಂದಾಗಿ ಬಚ್ಚೇಗೌಡರಿಗೆ ಇರಿಸು ಮುರಿಸಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಪರಿಸ್ಥಿತಿ ಬಿಜೆಪಿ ಚೆನ್ನಾಗಿ ಎನ್ ಕ್ಯಾಶ್ ಮಾಡಿಕೊಳ್ಳುತ್ತಿದ್ದು ಒಕ್ಕಲಿಗ ಕಾರ್ಡ್ ಪ್ಲೇ ಮಾಡಲಾಗುತ್ತಿದೆ.