ಟ್ಯಾಕ್ಸ್ ಕಟ್ಟೋರು ಗೃಹಲಕ್ಷ್ಮೀ ಕೇಳ್ತಿಲ್ಲ; ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು; ತೆರಿಗೆ ಪಾವತಿ ಮಾಡೋರು ಯಾರೂ ಕೂಡಾ ಗೃಹಲಕ್ಷ್ಮಿ ಹಣ ಬೇಕು ಎಂದು ಕೇಳುತ್ತಿಲ್ಲ. ನಮಗೆ ಬೇಡ ಎಂದು ಹಲವಾರು ಮಂದಿ ಪತ್ರ ಬರೆಯುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮನೆಯೊಡತಿ ಯಾರು ಅನ್ನೋದನ್ನು ಮನೆಯವರೇ ತೀರ್ಮಾನ ಮಾಡಬೇಕು ಎಂದು ಹೇಳಿದರು.
ಮನೆಯಲ್ಲಿ ಯಾರು ಯಜಮಾನಿ ಎಂದು ಅವರ ಮನೆಯವರೇ ತೀರ್ಮಾನ ಮಾಡಬೇಕು. ಆ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡೋದಿಲ್ಲ. ವೋಟರ್ ಲಿಸ್ಟ್‌ನಲ್ಲಿ ಮನೆಗಳ ಲೆಕ್ಕ ಇದೆ. ಎಪಿಎಲ್, ಬಿಪಿಎಲ್, ಅಂತ್ಯೋದಯ ಕಾರ್ಡ್ ಗಳ ಹೊಂದಿರುವವರ ವಿವರವೂ ಇದೆ. ಫಸ್ಟ್ ನೇಮ್ ಕೊಡಬೇಕಾ, ಸೆಕೆಂಡ್ ನೇಮ್ ಕೋಡಬೇಕಾ? ಅನ್ನೋದನ್ನು ಮನೆಯವರೇ ತೀರ್ಮಾನಿಸಬೇಕು ಅಂತ ಡಿ.ಕೆ.ಶಿವಕುಮಾರ್ ಹೇಳಿದರು.