Bengaluru

ಕೆ.ಆರ್‌ ಮಾರುಕಟ್ಟೆಯಲ್ಲಿ ಆರ್ ಟಿಪಿಸಿ ಆರ್‌ ಟೆಸ್ಟ್‌

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಹಾಗೂ ಒಮಿಕ್ರಾನ್‌ ಹಾವಳಿ ದಿನದಿಂದ ದಿನಕ್ಕೆ ಏರಿಕೆ ಕಂಡಿದೆ. ಇದನ್ನು ತಡೆಗಟ್ಟುವ ಸಲುವಾಗಿ ಈಗಾಗಲೇ ಸರ್ಕಾರ ಕ್ರಮ ಕೈಗೊಂಡಿದೆ. ಕಳೆದ ಮಂಗಳವಾರದಿಂದ ಬೆಂಗಳೂರಿನಲ್ಲಿ ನೈಟ್‌ ಕರ್ಫ್ಯೂ ವಿಧಿಸಿದೆ. ಅನಗತ್ಯ ಓಡಾಡುವರಿಗೆ ಪೊಲೀಸರು ವಿರುದ್ಧ ಕ್ರಮ ಕೈಗೊಂಡಿದ್ದಾರೆ. ತುರ್ತು ಸೇವೆ ಬಿಟ್ಟು ಬೇರ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ. ಆದರೂ ಕೂಡ ಬೆಂಗಳೂರಿನಲ್ಲಿ ಶೇ. ೨ರಷ್ಟು ಕೊರೋನಾ ಸೋಂಕಿನ ಪ್ರಮಾಣ ಜಾಸ್ತಿಯಾಗಿದೆ. ಇದ್ದರಿಂದ ಸಿಲಿಕಾನ್‌ ಸಿಟಿಯಲ್ಲಿ ಲಾಕ್‌ ಡೌನ್‌ ಭೀತಿ ಶುರುವಾಗಿದೆ. ಇದೀಗ ನಗರದ ಕೆ.ಆರ್‌ ಮಾರುಕಟ್ಟೆಯಲ್ಲಿ ಬಿಬಿಎಂಪಿ ಪಾಲಿಕೆ ಅವರು ಜನರಿಗೆ ಆರ್ ಟಿಪಿಸಿ ಆರ್‌ ಟೆಸ್ಟ್‌ ಮಾಡುವುದಕ್ಕೆ ಮುಂದಾಗಿದ್ದಾರೆ. ಅಲ್ಲಿಗೆ ದಿನನಿತ್ಯ ಸಾವಿರಾರೂ ಜನರು ಓಡಾಡುತ್ತಿದ್ದಾರೆ. \

ಹೀಗಾಗಿ ಮುಂಜಾಗ್ರಾತ ಕ್ರಮವಾಗಿ ಕೊರೋನಾ ಟೆಸ್ಟ್‌ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿನ ವ್ಯಾಪಾರಿಗಳು ಎಷ್ಟೋ ಮಂದಿ ಮಾಸ್ಕ್‌ ಧರಿಸದೆ ಇದ್ದಾರೆ. ಹೀಗಾಗಿ ಮಾರ್ಷಲ್ ಗಳು ಮಾಸ್ಕ್‌ ಇಲ್ಲದವರಿಗೆ ದಂಡ ವಿಧಿಸಿದ್ದಾರೆ. ಇದ್ದರಿಂದ ಜನರಿಗೆ ಲಾಕ್‌ ಡೌನ್‌ ದ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ  ವ್ಯಾಪಾರಿಗಳು ಲಾಕ್‌ ಡೌನ್‌ ಮಾಡದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇನ್ನು ರಾಜ್ಯ ಸರ್ಕಾರ ಕೊರೋನಾ ಮತ್ತು ಒಮಿಕ್ರಾನ್‌ ವ್ಯಾಪಕವಾಗಿ ರಾಜ್ಯದಲ್ಲಿ ಹರಡುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ನಾಳೆ ತಜ್ಞರ ಜೊತೆ ಚರ್ಚೆ ನಡೆಸಲಿದ್ದಾರೆ. ಜನರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕೊರೋನಾ ತಡೆಗಟ್ಟಬೇಕು ಎಂಬುದು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಸ್ಪಷ್ಟನೆ ನೀಡಿದ್ದಾರೆ.

Share Post