Politics

ಬೆಳಗಾವಿಯಲ್ಲಿ ಎರಡು ಮತಗಳು ರಿಜೆಕ್ಟ್‌

ಬೆಳಗಾವಿ:ವಿಧಾನ ಪರಿಷತ್ ನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಫಲಿತಾಂಶದ ಪ್ರಕ್ರಿಯೆ ಚುರುಕುಗೊಂಡಿದೆ. ಇನ್ನೇನು ಮಧ್ಯಾಹ್ನ ಹೊತ್ತಿಗೆ 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಅಷ್ಟೊರಲ್ಲೇ ಇಲ್ಲೊಂದು ಜಿಲ್ಲೆಯಲ್ಲಿ ಮತದಾನದ ವೇಳೆ ಶಾಂತಿ ಕಾಪಾಡದೇ ಆರೋಪದ ಹಿನ್ನೆಲೆಯಲ್ಲಿ ಮತ ಎಣಿಕೆ ಮೊದಲು ಎರಡು ಮತಗಳನ್ನು ತಿರಸ್ಕರಿಸಲಾಯಿತು. ಹೌದು ಜಿಲ್ಲೆಯ ಚಿಕ್ಕೋಡಿಯ ಆರ್​ಡಿಪಿಯು ಕಾಲೇಜಿನಲ್ಲಿ ಈಗಾಗಲೇ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಮತ‌ ಎಣಿಕೆ ಪ್ರಕ್ರಿಯೆಗೂ ಮುನ್ನವೇ ಗೌಪ್ಯತೆ ಕಾಪಾಡದೇ ಮತದಾನ ಮಾಡಿದ ಎರಡು ಮತಗಳನ್ನು ತಿರಸ್ಕರಿಸಿದ ಕುರಿತು ಪಕ್ಷದ ಏಜೆಂಟರಿಗೆ ಬೆಳಗಾವಿ ಚುನಾವಣಾಧಿಕಾರಿ ತಿಳಿಸಿದರು. ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿದೆ. ಚುನಾವಣಾ ಏಜೆಂಟ್, ಮತಗಟ್ಟೆ ಸಿಬ್ಬಂದಿ ಸಮ್ಮುಖದಲ್ಲಿ ಆ ಎರಡು ಮತಪತ್ರಗಳನ್ನು ರಿಜೆಕ್ಟ್‌ ಮಾಡಲಾಗಿದೆ.ಡಿಸೆಂಬರ್‌ ೧೦ ರಂದು ವಿಧಾನ ಪರಿಷತ್ ಚುನಾವಣೆ ನಡೆದಿತ್ತು. ಈ ವೇಳೆ ಇಬ್ಬರು ಗೌಪ್ಯತೆ ಕಾಪಾಡ ಹಿನ್ನೆಲೆಯಲ್ಲಿ ಮತಗಳನ್ನು ರಿಜೆಕ್ಟ್‌ ಮಾಡಲಾಯಿತು.

Share Post