BengaluruPolitics

ಎಟಿಎಂ ಸರ್ಕಾರದಲ್ಲಿ ಭ್ರಷ್ಟಾಚಾರದ ದರ್ಬಾರ್;‌ ಬಿಜೆಪಿ ಪೋಸ್ಟರ್‌ ರಿಲೀಸ್‌

ಬೆಂಗಳೂರು; ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ಬಿಜೆಪಿ ಪೋಸ್ಟರ್ ಬಿಡುಗಡೆ ಮಾಡಿದೆ. ಹೌದು, ಎಟಿಎಂ ಸರ್ಕಾರದಲ್ಲಿ ಭ್ರಷ್ಟಾಚಾರದ ದರ್ಬಾರ್ ಎಂಬ ಪೋಸ್ಟರ್​ನ್ನು ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ, ಶಾಸಕ ರವಿಸುಬ್ರಮಣ್ಯ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಬಿಡುಗಡೆ ಮಾಡಿದರು.

ನಿಗಮ-ಮಂಡಳಿಗೆ ರೇಟ್ ಫಿಕ್ಸ್ ಮಾಡಲು ಸುರ್ಜೇವಾಲ ಹಾಗೂ ವೇಣುಗೋಪಾಲ್ ಇಲ್ಲಿಗೆ ಬಂದಿದ್ದರು ಎಂದು ಆರೋಪಿಸಲಾಗಿದೆ.

ಬಿಜೆಪಿ ರಿಲೀಸ್ ಮಾಡಿದ ಪಟ್ಟಿ;

▪️ ಬಿಡಿಎ – ₹50 ಕೋಟಿ

▪️ ಬಿಡಬ್ಲೂಎಸ್‌ಎಸ್‌ಬಿ – ₹45 ಕೋಟಿ

▪️ ಕೆಆರ್‌ಐಡಿಎಲ್ – ₹20 ಕೋಟಿ

▪️ ಕಿಯೋನಿಕ್ಸ್ – ₹15 ಕೋಟಿ

▪️ ಕರ್ನಾಟಕ ಉಗ್ರಾಣ ನಿಗಮ – ₹12 ಕೋಟಿ

▪️ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – ₹10 ಕೋಟಿ

Share Post