ತ್ರಿಕೂಟ್ ಬೆಟ್ಟದಲ್ಲಿ ರೋಪ್‌ವೇ ಕ್ಯಾಬಿನ್‌ಗಳ ಡಿಕ್ಕಿ; ಮಹಿಳೆ ದುರ್ಮರಣ
ದಿಯೋಘರ್(ಜಾರ್ಖಂಡ್); ಜಾರ್ಖಂಡ್‌ನ ಡದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಸ್ಥಾನದ ಸಮೀಪವಿರುವ ತ್ರಿಕೂಟ್ ಬೆಟ್ಟದ ರೋಪ್‌ವೇ ನಲ್ಲಿ ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಕಾರಣ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ್ದಾರೆ. ರೋಪ್ ವೇನಲ್ಲೇ ಇನ್ನೂ 50 ಜನರು ಸಿಲುಕಿಕೊಂಡಿದ್ದು, 18 ಗಂಟೆಗೂ ಹೆಚ್ಚು ಸಮಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಹೆಲಿಕಾಪ್ಟರ್ ಮೂಲಕ ರೋಪ್ ವೇ ಕಾರುಗಳಲ್ಲಿ ಸಿಲುಕಿದ್ದವರನ್ನು ರಕ್ಷಣೆ ಮಾಡುವ ಕೆಲಸ ನಡೆಯುತ್ತಿದೆ.
ಇಲ್ಲಿನ ರೋಪ್‌ವೇನಲ್ಲಿ 12 ಕ್ಯಾಬಿನ್‌ಗಳಿದ್ದು, ಇದರಲ್ಲಿ ಸುಮಾರು 50 ಮಂದಿ ಸಿಲುಕಿದ್ದಾರೆ. ಗಂಟೆ ಗಟ್ಟಲೆ ಕಾದರೂ ರಕ್ಷಣೆ ಸಿಗದ ಹಿನ್ನೆಲೆಯಲ್ಲಿ ಕಾರಿನಿಂದ ಜಿಗಿದು ಪ್ರಾಣ ರಕ್ಷಿಸಿಕೊಳ್ಳಲು ದಂಪತಿಯೊಬ್ಬರು ಪ್ರಯತ್ನಿಸಿದ್ದು, ಅವರು ಗಾಯಗೊಂಡಿದ್ದಾರೆ. ಇದೇ ವೇಳೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡವನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಸ್ಥಳೀಯರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌ಗೆ ಸಹಾಯ ಮಾಡುತ್ತಿದ್ದಾರೆ. ತ್ರಿಕೂಟ್ ರೋಪ್‌ವೇ ಭಾರತದ ಅತಿ ಎತ್ತರದ ಉದ್ದನೇಯ ರೋಪ್‌ವೇ ಆಗಿದೆ. ಗರಿಷ್ಠ 44 ಡಿಗ್ರಿ ಲೆನ್ಸ್ ಕೋನವನ್ನು ಹೊಂದಿದೆ. ಬಾಬಾ ಬೈದ್ಯನಾಥ ದೇವಸ್ಥಾನದಿಂದ ಸುಮಾರು 20 ಕಿಲೋ ಮೀಟರ್ ದೂರದಲ್ಲಿ ರೋಪ್ ವೇ ಇದೆ. ಈ ರೋಪ್ ವೇ ಸುಮಾರು 766 ಮೀಟರ್ ಉದ್ದವಿದ್ದರೆ, ಬೆಟ್ಟವು 392 ಮೀಟರ್ ಎತ್ತರದಲ್ಲಿದೆ. ರೋಪ್ ವೇಯಲ್ಲಿ 25 ಕ್ಯಾಬಿನ್‌ಗಳಿವೆ. ಪ್ರತಿ ಕ್ಯಾಬಿನ್‌ನಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು.