ಮೇಕೆದಾಟು ವಿಚಾರದಲ್ಲಿ ತಮಿಳುನಾಡು ಕ್ಯಾತೆ; ಕೇಂದ್ರ ಸಚಿವರ ಭೇಟಿ ಮಾಡಿದ ತಮಿಳುನಾಡು ನಿಯೋಗ
ನವದೆಹಲಿ; ಕರ್ನಾಟಕ ಕೈಗೊಂಡಿರುವ ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸರ್ಕಾರದ ನಿಯೋಗ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಇತ್ತೀಚೆಗಷ್ಟೇ ತಮಿಳುನಾಡು ಸಿಎಂ ಸ್ಟಾಲಿನ್ ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದೀಗ ತಮಿಳುನಾಡು ಸರ್ಕಾರದ ಜಲಸಂಪನ್ಮೂಲ ಸಚಿವ ದುರೈ ಮುರುಗನ್ ನೇತೃತ್ವದ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ಮಾಡಿದೆ.
ಕಾವೇರಿ ಪ್ರಾಧಿಕಾರದಲ್ಲಿ ಮೇಕೆದಾಟು ವಿಚಾರದ ಬಗ್ಗೆ ಚರ್ಚೆ ಮಾಡಬಾರದು ಎಂದು ಕೇಂದ್ರ ಸಚಿವರಿಗೆ ತಮಿಳುನಾಡು ಸರ್ಕಾರದ ನಿಯೋಗ ಮನವಿ ಮಾಡಿದೆ. ಕರ್ನಾಟಕ ಸರ್ಕಾರ ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಮೇಕೆದಾಟು ಯೋಜನೆ ಕೈಗೆತ್ತಿಕೊಂಡಿದೆ. ಕಾನೂನಿನ ಅಡಿಯಲ್ಲಿಯೇ ಈ ಯೋಜನೆ ಮಾಡಲಾಗುತ್ತಿದೆ. ಆದ್ರೆ ಕಾವೇರಿ ವಿಚಾರದಲ್ಲಿ ಯಾವಾಗಲೂ ಕ್ಯಾತೆ ತೆಗೆಯುವ ತಮಿಳುನಾಡು ಸರ್ಕಾರ, ಈಗ ಮೇಕೆದಾಟು ವಿಚಾರದಲ್ಲೂ ಇದೇ ರೀತಿಯ ಹೆಜ್ಜೆ ಇಟ್ಟಿದೆ.