CrimeNational

ಚಂಡಿಗಢದಲ್ಲಿ ಸಿಲಿಂಡರ್‌ ಬ್ಲಾಸ್ಟ್‌; ಒಂದೇ ಕುಟುಂಬದ 6 ಮಂದಿ ಸಾವು..!

ಚಂಡೀಗಢ; ಚಂಡೀಗಢದಲ್ಲಿ ಭೀಕರ ದುರಂತವೊಂದು ನಡೆದಿದೆ. ಪಾಣಿಪತ್‌ನ ತಹಸಿಲ್ ಕ್ಯಾಂಪ್ ಪ್ರದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡಿದ್ದು, 4 ಮಕ್ಕಳು ಸೇರಿ ಆರು ಮಂದಿ ಸಜೀವ ದಹನವಾಗಿದ್ದಾರೆ.

ಅಬ್ದುಲ್ ಕರೀಂ (48), ಅವರ ಪತ್ನಿ ಅಫ್ರೋಜ್ (45), ಅವರ ಪುತ್ರಿಯರಾದ ಇಶ್ರತ್ (18), ರೇಷ್ಮಾ (16) ಮತ್ತು ಅಫ್ಸಾನಾ (8) ಮತ್ತು ಮಗ ಅಬ್ದುಶ್ ಶಕುರ್ (12) ಸಿಲಿಂಡರ್‌ ಸ್ಫೋಟದಲ್ಲಿ ಮೃತಪಟ್ಟ ದುರ್ದೈವಿಗಳು. ಮೃತರು ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ಎಂದು ತಿಳಿದುಬಂದಿದ್ದು, ಒಂದು ಕೊಠಡಿಯ ಬಾಡಿಗೆ ಮನೆಯಲ್ಲಿ ಎಲ್ಲರೂ ವಾಸಿಸುತ್ತಿದ್ದರು. ಬೆಳಗ್ಗೆ 6.30ರ ಸಮಯದಲ್ಲಿ ಸಿಲಿಂಡರ್‌ ಸ್ಫೋಟಿಸಿದ್ದು, ಈ ದುರಂತ ನಡೆದಿದೆ.

Share Post