National

ತಿರುಪತಿ ಲಡ್ಡು ವಿವಾದ; ಪ್ರಾಥಮಿಕ ಆಧಾರಗಳೇ ಇಲ್ಲ ಎಂದು ಸುಪ್ರೀಂಕೋರ್ಟ್‌

ನವದೆಹಲಿ; ತಿರುಪತಿ ಲಡ್ಡು ತಯಾರಿಯಲ್ಲಿ ಬಳಸಲಾಗುತ್ತಿದ್ದ ತುಪ್ಪದಲ್ಲಿ ಪ್ರಾಣಗಳ ಕೊಬ್ಬು ಬಳಸಲಾಗಿದೆ ಎಂದು ಆರೋಪ ಕೇಳಿಬಂದಿತ್ತು.. ಈ ಸಂಬಂಧ ಸುಪ್ರೀಂಕೋರ್ಟ್‌ ವಿಚಾರಣೆ ನಡೆಸಿದ್ದು, ಈ ಬಗ್ಗೆ ಹೇಳಿಕೆ ನೀಡಿದ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ತರಾಟೆಗೆ ತೆಗೆದುಕೊಂಡಿದೆ.. ಇಂದು ಸುಪ್ರೀಂಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ನಡೆಯಿತು.. ಈ ವೇಳೆ ನ್ಯಾಯಮೂರ್ತಿ ಲಡ್ಡೂ ತಯಾರಿಯಲ್ಲಿ ನಕಲಿ ತುಪ್ಪ ಬಳಸಲಾಗಿದೆಯಾ ಎಂಬ ಪ್ರಶ್ನೆ ಕೇಳಿದ್ದಾರೆ.. ಆಗ ಲಡ್ಡು ಕ್ವಾಲಿಟಿ ಚೆನ್ನಾಗಿಲ್ಲ ಎಂದು ಭಕ್ತರು ದೂರು ನೀಡಿದ್ದಾರೆ ಎಂದು ಸರ್ಕಾರದ ಪರ ವಕೀಲ ಲೂಥ್ರಾ ಸಮಜಾಯಿಷಿ ನೀಡುತ್ತಾರೆ.. ತಯಾರಾದ ಲಡ್ಡುವನ್ನು ಟೆಸ್ಟಿಂಗ್‌ ಕಳುಹಿಸಿದ್ದೀರಾ..? ತಿರಸ್ಕಾರ ಮಾಡಿದ ತುಪ್ಪದಲ್ಲಿ ನೀವು ಆರೋಪ ಮಾಡಿದ ಅಂಶಗಳಿವೆಯಾ ಎಂದೂ ನ್ಯಾಯಮೂರ್ತಿ ಪ್ರಶ್ನೆ ಮಾಡಿದ್ದಾರೆ. ಜೊತೆಗೆ ವಿಚಾರಣೆ ಪೂರ್ತಿಯಾಗುವುದಕ್ಕೆ ಮೊದಲೇ ನಕಲಿ ತುಪ್ಪ ಬಳಸಲಾಗಿದೆ ಎಂದು ಜನರ ಮುಂದೆ ಹೇಳಿದರೆ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ.. ಲ್ಯಾಬ್‌ ರಿಪೋರ್ಟ್‌ ಇರುವ ತುಪ್ಪದಿಂದ ಲಡ್ಡು ತಯಾರಿ ಮಾಡಿದ ಪ್ರಾಥಮಿಕ ಆಧಾರಗಳು ಇಲ್ಲ ಎಂದು ಕೋರ್ಟ್‌ ಹೇಳಿದೆ..
ಮೀಡಿಯಾ ನೀವು ಯಾಕೆ ಹೋದಿರಿ..?
ಇದು ಇನ್ನೂ ಆರೋಪ.. ಪೂರ್ತಿ ಪರಿಶೀಲನೆಯಾಗಿಲ್ಲ.. ಈ ಬಗ್ಗೆ ವಿಚಾರಣೆ ನಡೆಸುವ ಮುನ್ನವೇ ಮೀಡಿಯಾ ಮುಂದೆ ಯಾಕೆ ಹೋಗಿದ್ದೀರಿ..? ಇದರಿಂದ ಭಕ್ತರ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲವೇ ಎಂದು ನ್ಯಾಯಮೂರ್ತಿ ಪ್ರಶ್ನೆ ಮಾಡಿದ್ದಾರೆ.. ನಕಲಿ ತುಪ್ಪ ಬಳಸಿ ಲಡ್ಡು ತಯಾರಿ ಮಾಡಿದ್ದಾರೆ ಎಂಬುದಕ್ಕೆ ಆಧಾರಗಳೇ ಇಲ್ಲ. ನೀವು ಹೇಳುತ್ತಿರುವ ಲ್ಯಾಬ್‌ ರಿಪೋರ್ಟ್‌ ತಿರಸ್ಕಾರ ಮಾಡಿದ ಸ್ಯಾಂಪಲ್‌ ತುಪ್ಪದ ರಿಪೋರ್ಟ್‌ ಅಲ್ಲವೇ ಎಂದು ನ್ಯಾಯಮೂರ್ತಿ ಪ್ರಶ್ನೆ ಮಾಡಿದ್ದಾರೆ..
ನೀವು ವಿಶೇಷ ತನಿಖಾ ತಂಡದಿಂದ ತನಿಖೆ ಆದೇಶ ಮಾಡಿದ್ದೀರಿ.. ಹಾಗಿದ್ದ ಮೇಲೆ ತನಿಖೆ ಪೂರ್ತಿಯಾಗಬೇಕು ಅಲ್ಲವೇ..? ತನಿಖೆ ಪೂರ್ತಿಯಾಗುವುದಕ್ಕೂ ಮೊದಲೇ ಮೀಡಿಯಾ ಮುಂದೆ ಯಾಕೆ ಹೋದಿರಿ ಎಂದು ನ್ಯಾಯಮೂರ್ತಿ ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.. ದೇವರನ್ನು ರಾಜಕೀಯದಿಂದ ದೂರ ಇಡುತ್ತೀರಿ ಎಂದು ಆಶೀಸುತ್ತೇನೆ.. ಜುಲೈನಲ್ಲಿ ನಿಮಗೆ ದೂರು ಬಂದರೆ ಸೆಪ್ಟೆಂಬರ್‌ನಲ್ಲಿ ಯಾಕೆ ಮೀಡಿಯಾ ಮುಂದೆ ಹೋಗಿ ನಕಲಿ ತುಪ್ಪ ಬಳಸಲಾಗಿದೆ ಎಂದು ಹೇಳಿದ್ದೀರಿ ಎಂದು ಕೋರ್ಟ್‌ ಪ್ರಶ್ನೆ ಮಾಡಿದೆ.
ಟಿಟಿಡಿ ತುಪ್ಪದಲ್ಲಿ ಕಲಬೆರಕೆಯಾಗಿದೆ ಎಂದು ಗೊತ್ತಾದ ಟ್ಯಾಂಕರ್‌ ಅನ್ನು ನಾವು ಸ್ವೀಕಾರ ಮಾಡುವುದಿಲ್ಲ. ಅದನ್ನು ವಾಪಸ್‌ ಕಳುಹಿಸುತ್ತೇವೆ ಎಂದು ಹೇಳುತ್ತಿದೆ.. ಮೊದಲು ಟೆಸ್ಟ್‌ ಮಾಡಿಸಿಯೇ ತುಪ್ಪ ಸ್ವೀಕಾರ ಮಾಡುತ್ತೇನೆ ಎಂದು ಹೇಳುತ್ತಿದೆ.. ಹಾಗಾದರೆ ತಿರಸ್ಕಾರ ಮಾಡಿದ ತುಪ್ಪದಿಂದ ಸ್ಯಾಂಪಲ್‌ ಕಲೆಕ್ಟ್‌ ಮಾಡಿ ಪರೀಕ್ಷೆ ಮಾಡಿಸಿದರಾ ಎಂದು ವಕೀಲರು ವಾದ ಮಾಡಿದ್ದಾರೆ..

Share Post