National

39 ಚಾರ್‌ಧಾಮ್‌ ಯಾತ್ರಾರ್ಥಿಗಳ ಸಾವು

ಡೆಹರಾಡೂನ್; ಚಾರ್‌ಧಾಮ್‌ ಯಾತ್ರೆಗೆ ಬಂದಿದ್ದ ಯಾತ್ರಾರ್ಥಿಗಳಲ್ಲಿ 39 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿತ ಸಮಸ್ಯೆ ಹಾಗೂ ಮೌಂಟೇನ್ ಸಿಕ್‌ನೆಸ್ ಈ ಸಾವಿಗೆ ಕಾರಣ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅನಾರೋಗ್ಯ ಇರುವವರು ಹಾಗೂ ದೈಹಿಕವಾಗಿ ಸದೃಢರಲ್ಲದವರು ಯಾತ್ರೆಗೆ ಬರಬೇಡಿ ಎಂದು ಉತ್ತರಾಖಂಡ್‌ ಸರ್ಕಾರ ಮನವಿ ಮಾಡಿದೆ.

ಮೇ 3 ರಿಂದ ಚಾರ್ ಧಾಮ್ ಯಾತ್ರೆ ಆರಂಭವಾಗಿದೆ. ಇನ್ನೂ ಎರಡು ವಾರ ಕಳೆಯುವಷ್ಟರಲ್ಲೇ 39 ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಸದೃಢವಾಗಿಲ್ಲವೆಂದಾದರೆ ಯಾತ್ರೆಗೆ ಬರಬೇಡಿ ಎಂದು ಈಗಾಗಲೇ ಯಾತ್ರಾರ್ಥಿಗಳಿಗೆ ಸೂಚಿಸಲಾಗಿತ್ತು ಎಂದು ಆರೋಗ್ಯ ಇಲಾಖೆಯ ಡಿಜಿ ಡಾ. ಶೈಲಜಾ ಭಟ್ ತಿಳಿಸಿದ್ದಾರೆ. ಈ ವರ್ಷ ಚಾರ್ ಧಾಮ್ ಯಾತ್ರೆಗೆ ಹಿಂದೆಂದಿಗಿಂತಲೂ ಹೆಚ್ಚು ಜನಸಂದಣಿ ಏರ್ಪಟ್ಟಿದೆ. 18 ಮಂದಿ ಚಾರಣದ ಸಮಯದಲ್ಲೇ ಹೃದಯಾಘಾತದಿಂದ ಅಸುನೀಗಿದ್ದಾರೆ.

Share Post