CrimeNational

ಅದಾನಿಗೆ ಸೇರಿದ ಕಬ್ಬಿಣದ ಬ್ರಿಡ್ಜ್‌ನ್ನೇ ಕಳವು ಮಾಡಿದ ಚಾಲಾಕಿ ಕಳ್ಳರು..!

ಮುಂಬೈ; ಕಬ್ಬಿಣ ಕಳವು ಮಾಡೋದು, ಕಬ್ಬಿಣ ತುಂಬಿದ್ದ ಲಾರಿ ಕಳವು ಮಾಡೋದನ್ನು ನೋಡಿರುತ್ತೇವೆ. ಆದ್ರೆ ಕಬ್ಬಿಣದಿಂದ ತಯಾರಿಸಿದ್ದ ಬ್ರಿಡ್ಜ್‌ ಒಂದನ್ನೇ ಕಳವು ಮಾಡೋದು ಅಂದ್ರೆ ಅಚ್ಚರಿಯೇ ಸರಿ. ಆದ್ರೆ ಅಂತಹದ್ದೊಂದು ಘಟನೆ ಮುಂಬೈನಲ್ಲಿ ನಡೆದಿದೆ. ಅದಾನಿ ಕಂಪನಿಯವರು ಅಳವಡಿಸಿದ್ದ 6000 ಕೆಜಿ ತೂಕದ ಕಬ್ಬಿಣದ ಬ್ರಿಡ್ಜ್‌ನ್ನೇ ಕಳ್ಳರು ರಾತ್ರೋರಾತ್ರಿ ಎಸ್ಕೇಪ್‌ ಮಾಡಿದ್ದಾರೆ. ಈ ಸಂಬಂಧ ಮುಂಬೈ ಪೊಲೀಸರು ಇದೀಗ ನಾಲ್ವರನ್ನು ಅರೆಸ್ಟ್‌ ಮಾಡಿದ್ದಾರೆ.

ಸುಮಾರು ಎರಡು ಕೋಟಿ ರೂಪಾಯಿ ಮೌಲ್ಯದ ಬ್ರಿಡ್ಜ್‌ ಇದಾಗಿದ್ದು, ಸುಮಾರು 90 ಅಡಿ ಉದ್ದ ಇತ್ತೆಂದು ತಿಳಿದುಬಂದಿದೆ. ಮುಂಬೈನ ಮಲಾಡ್‌ ಪ್ರದೇಶದಲ್ಲಿ ಸಣ್ಣ ತೊರೆಯನ್ನು ದಾಟಲು ಈ ಬ್ರಿಡ್ಜ್‌ ನಿರ್ಮಾಣ ಮಾಡಲಾಗಿತ್ತು. ಆದ್ರೆ ರಾತ್ರೋರಾತ್ರಿ ದುಷ್ಕರ್ಮಿಗಳು ಈ ಬ್ರಿಡ್ಜ್‌ನ್ನು ಕೆಡವಿದ್ದಾರೆ. ನಂತರ ಅದನ್ನು ಅಲ್ಲಿಂದ ಬೇರೆಗೆ ಸಾಗಿಸಿಬಿಟ್ಟಿದ್ದಾರೆ. ಜನ ಓಡಾಡುವ ಪ್ರದೇಶದಲ್ಲೇ ಈ ಕೃತ್ಯ ನಡೆದಿರುವುದು ಯಾರಿಗೂ ನಂಬಲೂ ಆಗುತ್ತಿಲ್ಲ.

ಕಳೆದ ವರ್ಷ ಅದಾನಿ ಎಲೆಕ್ಟ್ರಿಸಿಟಿ ಸಂಸ್ಥೆಯ ಬೃಹತ್‌ ವಿದ್ಯುತ್‌ ಕೇಬಲ್‌ಗಳನ್ನು ಸಾಗಿಸುವ ಸಲುವಾಗಿ ಈ ಕಬ್ಬಿಣದ ಸೇತುವೆಯನ್ನು ಸಣ್ಣ ತೊರೆಗೆ ಅಳವಡಿಸಲಾಗಿತ್ತು ಎಂದು ತಿಳಿದುಬಂದಿದೆ. ಜೂನ್‌ 26ರಂದು ಅದಾನಿ ಸಂಸ್ಥೆ ಪೊಲೀಸರಿಗೆ ದೂರು ನೀಡಿದ್ದು, ಇದೀಗ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

Share Post