ಗುತ್ತಿಗೆದಾರರಿಂದ ಒಂದು ಪರ್ಸೆಂಟ್ ಕಮೀಷನ್; ಪಂಜಾಬ್ ಆರೋಗ್ಯ ಸಚಿವ ವಜಾ
ಚಂಡೀಗಢ; ಪಂಜಾಬ್‌ನಲ್ಲಿ ಎಎಪಿ ಸರ್ಕಾರ ರಚನೆಯಾಗಿ ಇನ್ನೂ ಒಂದು ತಿಂಗಳು ಕಳೆದಿಲ್ಲ. ಆಗಲೇ ಒಬ್ಬ ಸಚಿವನ ತಲೆದಂಡವಾಗಿದೆ. ಒಂದು ಪರ್ಸೆಂಟ್ ಕಮೀಷನ್ ಕೇಳಿದ ಆರೋಪದ ಮೇಲೆ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಸಿಎಂ ಭಗವಂತ್ ಮಾನ್ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ಬೆನ್ನಲ್ಲೇ ವಿಜಯ್ ಸಿಂಗ್ಲಾ ಅವರನ್ನು ಬಂಧಿಸಲಾಗಿದೆ.
ತಮ್ಮ ಇಲಾಖೆಯಲ್ಲಿ ಗುತ್ತಿಗೆ ಪಡೆದವರಿಂದ ವಿಜಯ್ ಸಿಂಗ್ಲಾ ಶೇಕಡಾ ೧ರಷ್ಟು ಕಮಿಷನ್ ಕೇಳಿದ್ದರು ಎನ್ನಲಾಗಿದೆ. ಈ ಕುರಿತಾಗಿ ದೂರು ಬಂದಿತ್ತು. ಜೊತೆಗೆ ಬಲವಾದ ಸಾಕ್ಷ್ಯ ಕೂಡಾ ಲಭ್ಯವಾಗಿತ್ತು. ಆದ್ದರಿಂದ ಸಂಪುಟದಿಂದ ವಿಜಯ್ ಸಿಂಗ್ಲಾ ಅವರನ್ನು ತೆಗೆಯಲಾಗಿದೆ. ಮುಖ್ಯಮಂತ್ರಿಯೊಬ್ಬರು ತಮ್ಮ ಸಚಿವರ ವಿರುದ್ಧ ನೇರ ಕ್ರಮಕ್ಕೆ ಮುಂದಾಗಿರುವುದು ದೇಶದ ಇತಿಹಾಸದಲ್ಲಿ ಇದು ಎರಡನೇ ಬಾರಿಯಾಗಿದೆ. 2015ರಲ್ಲಿಕೇಜ್ರಿವಾಲ್ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಸಚಿವರೊಬ್ಬರನ್ನು ವಜಾಗೊಳಿಸಿದ್ದು, ದೇಶದ ಮೊದಲ ಪ್ರಕರಣವಾಗಿತ್ತು.