ಜೂನ್ 24ರಿಂದ ಅಗ್ನಿಪಥ್ ಯೋಜನೆಯಡಿ ನೇಮಕಾತಿ
ನವದೆಹಲಿ; ಜೂನ್ 24 ಅಗ್ನಿಪಥ್ ಯೋಜನೆಯಡಿ ವಾಯುಪಡೆಗಳಲ್ಲಿಯೂ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಏರ್ ಚೀಫ್ ಮಾರ್ಶಲ್ ವಿ.ಆರ್. ಚೌಧರಿ ತಿಳಿಸಿದ್ದಾರೆ. ಅಗ್ನಿಪಥ್ ವಿರುದ್ಧ ಪ್ರತಿಭಟನೆ ಜೋರಾಗಿರುವ ಬೆನ್ನಲ್ಲೇ ನೇಮಕಾತಿ ಪ್ರಕ್ರಿಯೆ ನಡೆಸಲು ಸೇನಾಪಡೆ ತೀರ್ಮಾನ ಮಾಡಿದೆ.
ಇನ್ನು ಸೇನಾಪಡೆಗಳಲ್ಲಿ ನೇಮಕಾತಿಯ ಕುರಿತಂತೆ ಮಾತನಾಡಿದ ಜನರಲ್ ಪಾಂಡೆ ಅವರು, 2022ರ ನೇಮಕಾತಿಗೆ ಸಂಬಂಧಿಸಿದಂತೆ ಕನಿಷ್ಠ ವಯಸ್ಸನ್ನು 21 ರಿಂದ 23 ಕ್ಕೆ ಹೆಚ್ಚಿಸಲಾಗಿದೆ. ಸೇನಾಪಡೆಗೆ ಸೇರಲು ಕಳೆದ ಎರಡು ವರ್ಷಗಳಿಂದ ತಯಾರಿ ನಡೆಸುತ್ತಿದ್ದ ಯುವಕರಿಗೆ ಇದು ವರದಾನವಾಗಲಿದೆ ಎಂದು ಹೇಳಿದ್ದಾರೆ.