National

ನಿಮ್ಮ ನಾಯಕ ಪ್ರಧಾನಿ ಮೋದಿಗೆ ನಿದ್ರಾಹೀನತೆ ರೋಗ ಇದೆ, ಮೊದಲು ಚಿಕಿತ್ಸೆ ಕೊಡಿಸಿ: ಪ್ರಕಾಶ್‌ ರಾಜ್‌ ವ್ಯಂಗ್ಯ

ದೆಹಲಿ: ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಟ ಪ್ರಕಾಶ್ ರಾಜ್ ಮತ್ತೊಮ್ಮೆ ಸೆನ್ಸೇಷನಲ್ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿಯವರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ, ಅವರಿಗೆ ಬಿಜೆಪಿ ನಾಯಕರು ಮೊದಲು ಚಿಕಿತ್ಸೆ ಕೊಡಿಸಿ ಎಂದು ಕಟು ಟೀಕೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಟ್ವೀಟ್‌ಗೆ ಪ್ರಕಾಶ್ ರಾಜ್ ವ್ಯಂಗ್ಯವಾಡಿದ್ದಾರೆ.

ಟ್ವೀಟ್‌ನಲ್ಲಿ ಚಂದ್ರಕಾಂತ ಪಾಟೀಲ್, ನಮ್ಮ ಪ್ರಧಾನಿ ಮೋದಿಯವರು ಕೇವಲ ಎರಡು ಗಂಟೆ ನಿದ್ದೆ ಮಾಡುತ್ತಾರೆ ಮತ್ತು ದಿನದ 22 ಗಂಟೆ ಕೆಲಸ ಮಾಡುತ್ತಾರೆ ಎಂದಿದ್ದರು. ಈ ಕಾಮೆಂಟ್‌ಗಳಿಗೆ ಪ್ರಕಾಶ್ ರಾಜ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ದಯವಿಟ್ಟು ಸ್ವಲ್ಪ ಸಾಮಾನ್ಯ ಜ್ಞಾನವನ್ನು ಬಳಸಿ. ನಿದ್ರಾಹೀನತೆ ಒಂದು ರೋಗ. ವೈದ್ಯಕೀಯ ಪರಿಭಾಷೆಯಲ್ಲಿ ಇದನ್ನು ನಿದ್ರಾಹೀನತೆ ಎಂದು ಕರೆಯಲಾಗುತ್ತದೆ. ಅದರ ಬಗ್ಗೆ ಬಡಾಯಿ ಕೊಚ್ಚಿಕೊಳ್ಳಬಾರದು. ಆ ಕಾಯಿಲೆಯಿಂದ ನರಳುತ್ತಿರುವ ನಿಮ್ಮ ನಾಯಕನಿಗೆ ಚಿಕಿತ್ಸೆ ಕೊಡಿಸಿ’ ಎಂದು ಕಾಲೆಳೆದಿದ್ದಾರೆ.

ಇತ್ತೀಚೆಗಷ್ಟೇ ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ಕೇಂದ್ರ ಸರ್ಕಾರದಿಂದ ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳಿಗೆ ರಿಯಾಯ್ತಿ ಘೋಷಿಸಿರುವ ಬಗ್ಗೆಯೂ ಪ್ರಕಾಶ್ ತೀವ್ರವಾಗಿ ಖಂಡಿಸಿದ್ದಾರೆ ಎಂದು ತಿಳಿದುಬಂದಿದೆ. ಗೋಧ್ರಾ ಫೈಲ್ಸ್, ದೆಹಲಿ ಫೈಲ್ಸ್, ಜಿಎಸ್‌ಟಿ ಫೈಲ್ಸ್, ಡಿಮೋನೆಟಿಸ್ ಫೈಲ್ಸ್, ಕೋವಿಡ್ ಫೈಲ್ಸ್ ಮತ್ತು ಗಂಗಾ ಫೈಲ್ಸ್ ಎಂದು ಸಿನಿಮಾ ಮಾಡುತೀರಾ ಎಂದು ಕಾಶ್ಮೀರಿ ಫೈಲ್ಸ್‌ ಚಿತ್ರದ ನಿರ್ಮಾಪಕನಿಗೆ ಪ್ರಶ್ನೆ ಮಾಡಿದ್ರು.

Share Post