LifestyleNational

ಜನಸಂಖ್ಯೆಯಲ್ಲಿ ಭಾರತ ನಂಬರ್‌ ವನ್‌; ಚೀನಾ ಮೀರಿಸಿದ ಇಂಡಿಯಾ

ನವದೆಹಲಿ; ಪ್ರಪಂಚದ ಜನಸಂಖ್ಯೆಯಲ್ಲಿ ಭಾರತ ನಂಬರ್‌ ವನ್‌ ಸ್ಥಾನ ಗಿಟ್ಟಿಸಿಕೊಂಡಿದೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳು ಇದನ್ನು ಸಾರಿ ಹೇಳುತ್ತಿವೆ. ಭಾರತ 142.86 ಕೋಟಿ ಜನಸಂಖ್ಯೆ ಹೊಂದಿದೆ ಎಂದು ವಿಶ್ವಸಂಸ್ಥೆ ಅಂಕಿಅಂಶಗಳು ಹೇಳುತ್ತಿವೆ. ಇದುವರೆಗೂ ಮೊದಲ ಸ್ಥಾನದಲ್ಲಿದ್ದ ಚೀನಾ ಜನಸಂಖ್ಯೆ ಈಗ 142.57 ಕೋಟಿಯಷ್ಟಿದೆ ಎಂದು ತಿಳಿದುಬಂದಿದೆ. ಅಂದರೆ ಭಾರತ ಚೀನಾವನ್ನು ಹಿಂದಿಕ್ಕಿದೆ.

ಭಾರತದಲ್ಲಿರುವ ಜನಸಂಖ್ಯೆಯಲ್ಲಿ ಕಾಲು ಭಾಗ 14 ವರ್ಷದ ಒಳಗಿವರಾಗಿದ್ದಾರೆ. ಇನ್ನು ಶೇಕಡಾ 68 ರಷ್ಟು ಮಂದಿ 15 ರಿಂದ 64 ವರಯಸ್ಸಿನ ನಡುವಿನವರು ಎಂದು ತಿಳಿದುಬಂದಿದೆ. ಶೆಕಡಾ 7ರಷ್ಟು ಜನ ಮಾತ್ರ 65 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಭಾರತದಲ್ಲಿ ಯುವ ಸಮುದಾಯ ಹೆಚ್ಚಿದೆ. ಆದ್ರೆ ಚೀನಾದಲ್ಲಿ ವಯಸ್ಸಾದವರು ಹೆಚ್ಚಿದ್ದಾರೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ಚೀನಾದಲ್ಲಿ ಮಕ್ಕಳ ಜನನ ಪ್ರಮಾಣ ಸಾಕಷ್ಟು ಕುಸಿತ ಕಂಡಿರುವುದರಿಂದ ಭಾರತ ಚೀನಾವನ್ನು ಹಿಂದಿಕ್ಕಿದೆ ಎಂದು ತಿಳಿದುಬಂದಿದೆ.

Share Post