ಪಾಕ್ ಉಗ್ರನಿಗೆ ಗುಂಡಿಕ್ಕಿದ ಯೋಧರು: ಓರ್ವ ಪೊಲೀಸ್ ಹುತಾತ್ಮ
ಶ್ರೀನಗರ: ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಜೈಶ್ಎ-ಮೊಹಮ್ಮದ್(ಜೆಇಎಂ) ಉಗ್ರ ಹತ್ಯೆಯಾಗಿದ್ದು, ಓರ್ವ ಪೊಲೀಸ್ ಕಾನ್ಸ್ಟೇಬಲ್ ಹುತಾತ್ಮರಾಗಿರುವ ಘಟನೆ ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ನಡೆದಿದೆ. ಗುಂಡಿನ ಕಾಳಗದಲ್ಲಿ ಮೂವರು ಯೋಧರು ಸೇರಿ ಐವರು ಗಾಯಗೊಂಡಿದ್ದಾರೆ.
ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಪರಿವಾನ್ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಉಗ್ರ ಅಡಗಿ ಕುಳಿತಿದ್ದ ಮನೆಯನ್ನು ಭದ್ರತಾ ಪಡೆಗಳ ಸುತ್ತುವರೆದಿವೆ. ಕೂಡಲೇ ಗ್ರ ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಪೊಲೀಸ್ ಕಾನ್ಸ್ಟೆಬಲ್ ರೋಹಿತ್ ಹುತಾತ್ಮರಾಗಿದ್ದಾರೆ. ಸೇನೆಯ ಮೂವರು ಯೋಧರು ಹಾಗೂ ಇಬ್ಬರು ನಾಗರಿಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹತನಾದ ಉಗ್ರ ಪಾಕಿಸ್ಥಾನ ಮೂಲದ ಬಾಬರ್ ಭಾಯ್ ಎನ್ನಲಾಗಿದೆ. ಹಲವಾರು ಭಯೋತ್ಪಾದನೆ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಎಂದು ಕಾಶ್ಮೀರ ಪೊಲೀಸು ತಿಳಿಸಿದ್ದಾರೆ. ಉಗ್ರನ ಬಳಿಯಿದ್ದ ಪಿಸ್ತೂಲ್ ಹಾಗೂ ಎರಡು ಗ್ರೆನೇಡ್ಗಳನ್ನು ವಶಪಡಿಸಿಕೊಂಡಿಸಿಕೊಂಡಿದ್ದಾರೆ.
#KulgamEncounterUpdate: One police personnel SgCt Rohit Chhib attained #martyrdom, 03 Army soldiers got injured. 02 civilians also got minor injuries. 01 #terrorist of #terror outfit JeM killed. #Operation continues: IGP Kashmir@JmuKmrPolice https://t.co/7VWKkqTnbQ
— Kashmir Zone Police (@KashmirPolice) January 12, 2022