CrimeNational

ದುಬೈಗೆ ಕರೆದೊಯ್ಯದಿದ್ದಕ್ಕೆ ಕೋಪ; ಮೂಗಿಗೆ ಗುದ್ದಿ ಗಂಡನನ್ನು ಸಾಯಿಸಿದ ಮಹಿಳೆ!

ಪುಣೆ; ಹುಟ್ಟುಹಬ್ಬ ಆಚರಿಸಲು ದುಬೈಗೆ ಕರೆದುಕೊಂದು ಹೋಗದಿದ್ದಕ್ಕೆ ಕೋಪ ಮಹಿಳೆಯೊಬ್ಬಳು ಗಂಡನ ಮೂಗಿಗೆ ಗುದ್ದಿ ಕೊಲೆ ಮಾಡಿದ್ದಾಳೆ. ಮಹಾರಾಷ್ಟ್ರದ ಪುಣೆಯ ವನವಡಿ ಪ್ರದೇಶದಲ್ಲಿ ಇಂತಹದ್ದೊಂದು ಆಘಾತಕಾರಿ ಕೃತ್ಯ ನಡೆದಿದೆ.

ವನವಡಿ ಪ್ರದೇಶದಲ್ಲಿರುವ ಅಪಾರ್ಟ್​​ಮೆಂಟ್‌ನ ವಾಸಿ 36 ವರ್ಷದ ನಿಖಿಲ್‌ ಖನ್ನಾ ಕೊಲೆಯಾದ ವ್ಯಕ್ತಿ. ಕಟ್ಟಡ ನಿರ್ಮಾಣ ಕ್ಷೇತ್ರದ ಉದ್ಯಮಿಯಾಗಿರುವ ನಿಖಿಲ್‌ ಖನ್ನಾ ಆರು ವರ್ಷಗಳ ಹಿಂದೆ ತನಗಿಂತ ಎರಡು ವರ್ಷ ಹಿರಿಯಳಾದ ರೇಣುಕಾ ಎಂಬಾಕೆಯನ್ನು ಮದುವೆಯಾಗಿದ್ದರು. ಇವರದ್ದು ಲವ್‌ ಮ್ಯಾರೇಜ್‌ ಆಗಿದ್ದು, ರೇಣುಕಾ ಅವರ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವ ಇತ್ತು. ಇದನ್ನು ಆಚರಿಸಲು ದುಬೈಗೆ ಕರೆದುಕೊಂಡು ಹೋಗುವುದಾಗಿ ನಿಖಿಲ್‌ ಹೇಳಿದ್ದರು.

ಆದ್ರೆ ಕಾರಣಾಂತರಗಳಿಂದ ನಿಖಿಲ್‌ ತನ್ನ ಪತ್ನಿಯನ್ನು ದುಬೈಗೆ ಕರೆದುಕೊಂಡು ಹೋಗಲು ಆಗಿಲ್ಲ. ಜೊತೆಗೆ ದುಬಾರಿ ಉಡುಗೊರೆಯನ್ನೂ ಪತ್ನಿಗೆ ನೀಡಿಲ್ಲ. ಇದರಿಂದಾಗಿ ಇಬ್ಬರ ನಡುವೆ ದೊಡ್ಡ ಜಗಳವಾಗಿದೆ. ಈ ವೇಳೆ ಕೋಪಗೊಂಡ ರೇಣುಕಾ ತನ್ನ ಗಂಡ ನಿಖಿಲ್‌ ಮೂಗಿಗೆ ಜೋರಾಗಿ ಗುದ್ದಿದ್ದಾಳೆ. ಇದರಿಂದ ಮೂಗು ಮುರಿದಿದೆ. ಅಷ್ಟೇ ಅಲ್ಲ ಕೆಲ ಹಲ್ಲುಗಳು ಕೂಡಾ ಉದುರಿವೆ. ಇದರಿಂದಾಗಿ ನಿಖಿಲ್‌ ಪ್ರಜ್ಞೆ ತಪ್ಪಿಬಿದ್ದಿದ್ದು, ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗೆ ಸಾವನ್ನಪ್ಪಿದ್ದಾರೆ. ರೇಣುಕಾ ಅವರು ವಿರುದ್ಧ ಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

 

Share Post