National

ಕೊರೊನಾ ತಡೆಗೆ ತಮಿಳುನಾಡು ಲಾಕ್‌ಡೌನ್‌

ಚನ್ನೈ: ಕೊರೊನಾ ೩ನೇ ಅಲೆ ರೂಪಾಂತರಿ ಓಮಿಕ್ರಾನ್‌ ಅಬ್ಬರಕ್ಕೆ ತಮಿಳುನಾಡು ಸರ್ಕಾರ ಆತಂಕ ವ್ಯಕ್ತಪಡಿಸಿದೆ. ಈಗಾಗಲೇ ಹಲವು ರಾಜ್ಯಗಳು ನೈಟ್‌, ವೀಕೆಂಡ್‌ ಕರ್ಫ್ಯೂ ಜಾರಿಗೊಳಿಸಿರುವ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರವು ಕೂಡ ಇಂದು ಮಹತ್ವದ ನಿರ್ಧಾರವನ್ನು ಪ್ರಕಟಿಸಿದೆ.

ಭಾನುವಾರ ದಿನ ಪೂರ್ತಿ ಕರ್ಫ್ಯೂ ವಿಧಿಸಿರುವುದಾಗಿ ಮುಖ್ಯಮಂತ್ರಿ ಸ್ಟಾಲಿನ್‌ ತಿಳಿಸಿದ್ರು. ತುರ್ತು ಪರಿಸ್ಥಿತಿ, ಅತ್ಯವಶ್ಯಕ ಕೆಲ-ಕಾರ್ಯಗಳಿಗೆ ಮಾತ್ರ ಅವಕಾಶ ನೀಡಿದ್ದು, ಉಳಿದಂತೆ ಎಲ್ಲದಕ್ಕೂ ನಿರ್ಬಂಧ ಹೇರಲಾಗಿದೆ. ಉಳಿದ ದಿನಗಳಲ್ಲಿ ೫೦-೫೦ ನಿಯಮಾವಳಿಗಳನ್ನು ಜಾರಿಗೆ ತಂದಿದ್ದಾರೆ. ಸಿನಿಮಾ ಥಿಯೇಟರ್‌, ಮೆಟ್ರೋ ರೈಲು, ಹೋಟೆಲ್‌, ಜಿಮ್‌ ಇತರೆಡೆ ಕೇವಲ ೫೦ರಷ್ಟು ಮಂದಿಗೆ ಅವಕಾಶ ಕಲ್ಪಿಸಿದ್ದಾರೆ. ದೇವಾಲಯ, ಮಸೀದಿ ಚರ್ಚ್‌ಗಳಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ಸಂಪೂರ್ಣ ಅನುಮತಿ ನೀಡಿದ್ದಾರೆ. ಮದುವೆ, ಶುಭ ಸಮಾರಂಭಗಳಿಗೆ ನೂರು ಜನ, ಅಂತ್ಯತಕ್ರಿಯೆಗೆ ೫೦ ಮಂದಿ ಸೇರಲು ಅನುಮತಿಸಿದ್ದಾರೆ. 24ಗಂಟೆಯಲ್ಲಿ 2,731ಕೊರೊನಾ ಪ್ರಕರಣಗಳು ದಾಖಲಾಗಿರುವುದು ಆರೋಗ್ಯ ಇಲಾಖೆ ಪ್ರಕಟಿಸಿದೆ.

Share Post