National

ದೇಶದಲ್ಲಿ ಮತ್ತೆ ʻಗ್ಯಾಸ್‌ʼ ಟ್ರಬಲ್‌; ಎಲ್‌ಪಿಜಿ ಸಿಲಿಂಡರ್‌ ದರ 50 ರೂಪಾಯಿ ಏರಿಕೆ..!

ನವದೆಹಲಿ; ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು 50 ರೂಪಾಯಿ ಹೆಚ್ಚಿಸಲಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಎಲ್‌ಪಿಜಿ ದರ 1055.50 ರೂಪಾಯಿ ಆಗಿದೆ. ದೆಹಲಿಯಲ್ಲಿ ಸಿಲಿಂಡರ್‌ ರಿಫಿಲಿಂಗ್‌ ದರ 1,053 ರೂಪಾಯಿಗೆ ಏರಿಕೆ ಆಗಿದೆ.

ಖುಷಿ ವಿಚಾರ ಎಂದರೆ ವಾಣಿಜ್ಯ ಬಳಕೆ ಎಲ್‌ಪಿಜಿ ದರ ಸ್ವಲ್ಪ ಕಡಿಮೆಯಾಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರ ಇಂದಿನಿಂದ ಅನ್ವಯವಾಗುವಂತೆ 8.50 ರೂಪಾಯಿ ಕಡಿಮೆ ಆಗಿದೆ. 19 ಕೆ.ಜಿ. ತೂಕದ ಸಿಲಿಂಡರ್‌ ದರ 2,100ಕ್ಕೆ ಸಿಗಲಿದೆ.

Share Post