ಹೊಸ ವರ್ಷಾಚರಣೆ – ತಮಿಳುನಾಡಿನ ಬೀಚ್‌ಗಳಿಗೆ ನಿರ್ಬಂಧ
ಚೆನೈ : ಒಮಿಕ್ರಾನ್ ಭೀತಿ ಎಲ್ಲೆಡೆ ವ್ಯಾಪಿಸಿದೆ. ಒಮಿಕ್ರಾನ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ತಮಿಳುನಾಡು ಸರ್ಕಾರ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದೆ. ತಮಿಳುನಾಡು ಸರ್ಕಾರ ಡಿಸೆಂಬರ್ 31 ಮತ್ತು ಜನವರಿ ೧ ರಂದು ಬೀಚ್‌ಗಳಿಗೆ ನಿರ್ಬಂಧ ಹೇರಿದೆ.
ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ಅವರು ಸೋಮವಾರ ಮಾತನಾಡಿ ಬೀಚ್‌ಗಳಿಗೆ ಸಾರ್ವಜನಿಕರ ನಿರ್ಬಂಧವನ್ನು ಅಧಿಕೃತವಾಗಿ ಘೋಷಿಸಿದರು. ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಭೆಗಳಲ್ಲಿ ಈ ಹಿಂದೆ ಇದ್ದ ಮಾರ್ಗಸೂಚಿಗಳನ್ನು ಮುಂದುವರಿಸುವಂತೆ ಸೂಚಿಸಿದ್ದಾರೆ