ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳೊದು ಹೇಗೆ?
ಬೆಂಗಳೂರು: ನವೆಂಬರ್- ಡಿಸೆಂಬರ್ ಬಂದ್ರೆ ಸಾಕು ಚಳಿಗಾಲ ಶುರುವಾಗುತ್ತದೆ. ಈ ದಿನಗಳನಲ್ಲಿ ಹೆಚ್ಚಾಗಿ ಜನರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ.
ಮಂಜಿನ ಮುಂಜಾನೆ ಮತ್ತು ತಂಪಾದ ಸಂಜೆ ಕೆಲವರಿಗೆ ತೊಂದರೆ ತರುತ್ತದೆ. ಹೀಗಿರುವಾಗ ನಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ತಿಳಿದುಕೊಳ್ಳಬೇಕು.
ಅಸ್ತಮಾ ಮತ್ತು ಸಿಒಪಿಡಿಯಂತಹ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಋತುವಿನಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟ. ಏನೆಲ್ಲ ಸಮಸ್ಯೆ ಬರಬಹುದು ನೋಡೊಣ
ನೆಗಡಿ
ಹೆಚ್ಚಿನ ಜನರು ಚಳಿಗಾಲದಲ್ಲಿ ನೆಗಡಿಯಿಂದ ಬಳಲುತ್ತಿದ್ದಾರೆ. ಈ ರೋಗವು ಸಾಮಾನ್ಯ ಮತ್ತು ಹರಡುತ್ತದೆ ಸಹ. ಇದನ್ನು ನಿರ್ಲಕ್ಷ್ಯ ಮಾಡುವುದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು.
ಇನ್ಫ್ಲುಯೆನ್ಸ
ಇನ್ಫ್ಲುಯೆನ್ಸವನ್ನು ಸಾಮಾನ್ಯವಾಗಿ ಫ್ಲೂ ಎಂದು ಕರೆಯಲಾಗುತ್ತದೆ, ಇದು ಇನ್ಫ್ಲುಯೆನ್ಸ ವೈರಸ್ ನಿಂದ ಉಂಟಾಗುವ ವೈರಲ್ ಸೋಂಕು, ಆದರೆ ಸಾಮಾನ್ಯ ಶೀತಕ್ಕಿಂತ ಹೆಚ್ಚು ತೀವ್ರವಾಗಿರುತ್ತದೆ ಎನ್ನಲಾಗುತ್ತದೆ.
ಬ್ರಾಂಕೈಟಿಸ್
ಈ ಸ್ಥಿತಿಯು ಶ್ವಾಸಕೋಶದಲ್ಲಿ ಶ್ವಾಸನಾಳದ ಉರಿಯೂತದಿಂದ ಉಂಟಾಗುತ್ತದೆ. ಈ ಸ್ಥಿತಿಯು ತೀವ್ರವಾದ ಕೆಮ್ಮು ಮತ್ತು ಕಫದಿಂದ ಕೂಡಿರುತ್ತದೆ.
ನ್ಯುಮೋನಿಯಾ
ಸೋಂಕಿನಿಂದಾಗಿ ನಿಮ್ಮ ಶ್ವಾಸಕೋಶದಲ್ಲಿನ ಗಾಳಿಯ ಚೀಲಗಳು ದ್ರವ ಅಥವಾ ಕೀವುಗಳಿಂದ ತುಂಬಿದಾಗ ನ್ಯುಮೋನಿಯಾ ಸಂಭವಿಸುತ್ತದೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಹೆಚ್ಚು ಕೆಮ್ಮಿರುತ್ತದೆ. ಇದನ್ನು ನಾವು ಕಡೆಗಾಣಿಸಿದರೆ ಹೆಚ್ಚಿನ ತೊಂದರೆ ಮಾಡುವ ಅಪಾಯ ಹೆಚ್ಚಿರುತ್ತದೆ.
ಚಳಿಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ ?
ಆರಾಮದಾಯಕ ಬೆಚ್ಚಗಿನ ಬಟ್ಟೆಗಳನ್ನು ಧರಿಸಿ ದೇಹದ ಉಷ್ಣತೆಯನ್ನು ನಿಯಂತ್ರಿಸಿ- ನಿಮ್ಮ ಕೈಗಳನ್ನು ಶುಚಿಯಾಗಿರಿಸಿ ಮತ್ತು ರೋಗಾಣು ಮುಕ್ತವಾಗಿರಿಸಿಕೊಳ್ಳಿ.
ಕೊಳಕು ಕೈಗಳಿಂದ ನಿಮ್ಮ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಮುಟ್ಟುವ ಅಭ್ಯಾಸ ಬಿಡಿ ಗಾಳಿಯ ಗುಣಮಟ್ಟ ಉತ್ತಮವಾಗಿಲ್ಲದಿದ್ದರೆ ವಾಕಿಂಗ್ ಹೋಗಬೇಡಿ. ಮನೆಯಲ್ಲಿ ಏರೋಬಿಕ್ ವ್ಯಾಯಾಮ ಮಾಡಿ. ನಿಮ್ಮ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಕೆಲವು ಉಸಿರಾಟದ ವ್ಯಾಯಾಮಗಳನ್ನು ಮಾಡಿ.
ನಿಮ್ಮ ಮನೆಯಲ್ಲಿ ಧೂಳುಗಳನ್ನು ಸ್ವಚ್ಛ ಮಾಡಿ, ಅಲರ್ಜಿ ವಸ್ತುಗಳಿಂದ ದೂರವಿರಿ. ಹಾಸಿಗೆಗಳು, ಕಾರ್ಪೆಟ್‌ಗಳು, ದಿಂಬುಗಳು ಮತ್ತು ಸೋಫಾಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು.