National

ಕೊರೊನಾ ವೇಳೆಯಲ್ಲೂ ಕೋಟಿ ಕೋಟಿ ಆದಾಯ; ನೆಲದಲ್ಲಿ ಸಿಕ್ತು 10 ಕೋಟಿ ಹಣ..!

ಮುಂಬೈ; ಖಾಸಗಿ ಕಂಪನಿಯೊಂದರ ಮೇಲೆ ದಾಳಿ ವೇಳೆ ಜಿಎಸ್‌ಟಿ ಅಧಿಕಾರಿಗಳಿಗೆ ಶಾಕ್‌ ಆಗುವಂತಹ ಸನ್ನಿವೇಶ ಸೃಷ್ಟಿಯಾಗಿದೆ. ಮುಂಬೈನ ಝವೇರಿ ಬಜಾರ್‌ ಪ್ರದೇಶದಲ್ಲಿ ಸಂದೇಶ ಚಾಮುಂಡಾ ಬುಲಿಯನ್‌ ಎಂಬ ಕಂಪನಿ ಇದೆ. ಇದರ ವಹಿವಾಟು ವರ್ಷದಿಂದ ವರ್ಷಕ್ಕೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗುತ್ತಿತ್ತು. ಇದ್ರಿಂದ ಅನುಮಾನಗೊಂಡು ಜಿಎಸ್‌ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಅವರಿಗೆ 9 ಕೋಟಿ 78 ಲಕ್ಷ ರೂಪಾಯಿ ನಗದು ಹಾಗೂ 19 ಕೆಜಿಯಷ್ಟು ಬೆಳ್ಳಿ ಇಟ್ಟಿಗೆಗಳು ಪತ್ತೆಯಾಗಿವೆ. ಅದೂ ಕೂಡಾ ಇವುಗಳನ್ನು ಗೋಡೆ ಮತ್ತು ನೆಲದಲ್ಲಿ ಹೂತಿಡಲಾಗಿದ್ದು, ತಪಾಸಣೆ ವೇಳೆ ಪತ್ತೆಯಾಗಿವೆ. ಇದನ್ನು ನೋಡಿ ಅಧಿಕಾರಿಗಳು ದಂಗಾಗಿದ್ದಾರೆ.

 

ಸಂದೇಶ ಚಾಮುಂಡಾ ಬುಲಿಯನ್​ ಕಂಪನಿಯ ವಹಿವಾಟು 2019-20ರಲ್ಲಿ 22.3 ಕೋಟಿ ರೂಪಾಯಿ ಇತ್ತು. ಆದ್ರೆ, ಕೊರೊನಾ ಹಿನ್ನೆಲೆಯಲ್ಲಿ ಎಲ್ಲರೂ ವಹಿವಾಟಿನಲ್ಲಿ ನಷ್ಟ ಅನುಭವಿಸಿದ್ದರೆ ಇವರು ಮಾತ್ರ 2020-21ರಲ್ಲಿ ಬರೋಬ್ಬರಿ 652 ಕೋಟಿ ರೂಪಾಯಿ ವಹಿವಾಟು ನಡೆದಿದೆ ಎಂದು ತೋರಿಸಿದ್ದರು. 2021-22ರಲ್ಲಿ 1764 ಕೋಟಿ ರೂಪಾಯಿಗೆ ಏರಿಕೆಯಾಗಿತ್ತು. ಇದ್ರಿಂದಾಗಿ ಜಿಎಸ್‌ಟಿ ಅಧಿಕಾರಿಗಳಿಗೆ ಕಂಪನಿ ಬಗ್ಗೆ ಅನುಮಾನ ಉಂಟಾಗಿ ದಾಳಿ ನಡೆಸಿದ್ದರು.

 

ಕಂಪನಿ 34 ಚದರ ಮೀಟರ್ ಪ್ರದೇಶದಲ್ಲಿ 9 ಕೋಟಿ 78 ಲಕ್ಷ ನಗದು ಪತ್ತೆಯಾಗಿದೆ. ಇನ್ನು ಕಂಪನಿಯ ಗೋಡೆ ಮತ್ತು ನೆಲದ ಕುಳಿಗಳಲ್ಲಿ ಹುಡುಕಿದಾಗ 19 ಕೆಜಿಯಷ್ಟು ಬೆಳ್ಳಿಯ ಇಟ್ಟಿಗೆಗಳು ಸಿಕ್ಕಿವೆ.

Share Post