HealthNational

ಕೇರಳದಲ್ಲಿ ನಿಫಾ ವೈರಸ್‌ ಭೀತಿ; ಇಬ್ಬರು ಬಲಿ, ಮತ್ತಿಬ್ಬರಿಗೆ ಸೋಂಕು..!

ಕೊಯಿಕ್ಕೋಡ್‌; ದೇಶದಲ್ಲಿ ಜನ ಇನ್ನೂ ಕೊರೊನಾದಿಂದಾದ ನಷ್ಟದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹೀಗಿರುವಾಗಲೇ ಮತ್ತೊಂದು ವೈರಸ್‌ ಭೀತಿಯನ್ನುಟ್ಟಿಸುತ್ತಿದೆ. ಕೇರಳದಲ್ಲಿ ನಿಫಾ ವೈರಸ್‌ ಜನರಲ್ಲಿ ಆತಂಕವನ್ನುಂಟು ಮಾಡಿದೆ. ಇಲ್ಲಿ ಕೊಯಿಕ್ಕೋಡಿನಲ್ಲಿ ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ. ಅವರ ಸಂಪರ್ಕದಲ್ಲಿದ್ದ ಮತ್ತಿಬ್ಬರಿಗೆ ವೈರಸ್‌ ತಗುಲಿದ್ದು, ಜನರಲ್ಲಿ ಆತಂಕ ಹೆಚ್ಚಾಗಲು ಕಾರಣವಾಗಿದೆ.

40, 49 ವರ್ಷದ ಇಬ್ಬರು ನಿಫಾ ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಇವರ ಸಂಪರ್ಕದಲ್ಲಿದ್ದ ಇಬ್ಬರಿಗೆ ವೈರಸ್‌ ಬಂದಿದೆ. ೯ ವರ್ಷದ ಮುಗು, ೨೪ ವರ್ಷದ ಸಂಬಂಧಿಗೂ ನಿಫಾ ವೈರಸ್‌ ತಗುಲಿರುವುದು ಕನ್ಫರ್ಮ್‌ ಆಗಿದೆ. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಎಲ್ಲರೂ ಮಾಸ್ಕ್‌ ಧರಿಸಿಕೊಂಡು ಓಡಾಡುವಂತೆ ಸೂಚನೆ ನೀಡಲಾಗಿದೆ.

ಈ ನಿಫಾ ವೈರಸ್‌ ಬಾವಲಿಗಳಿಂದ ಮನುಷ್ಯರಿಗೆ ಹರಡುತ್ತದೆ. ಒಬ್ಬ ಮನುಷ್ಯನಿಗೆ ಈ ವೈರಸ್‌ ತಗುಲಿದರೆ ನಂತರ ಒಬ್ಬರಿಂದ ಒಬ್ಬರಿಗೆ ಅದು ಹರಡುತ್ತಾ ಹೋಗುತ್ತದೆ. ಬಾವಲಿಗಳು ಮರಗಳಲ್ಲಿ ಹಣ್ಣುಗಳನ್ನು ತಿನ್ನುತ್ತವೆ. ಬಾವಲಿ ಹಣ್ಣನ್ನು ಕಚ್ಚಿದಾಗ ನಿಫಾ ವೈರಸ್‌ ಆ ಹಣ್ಣಿಗೆ ಹರಡುತ್ತದೆ. ಹಾಗೆ ಬಾವಲಿ ಕಚ್ಚಿದ ಹಣ್ಣನ್ನು ಮನುಷ್ಯ ತಿಂದರೆ ನಿಫಾ ವೈರಸ್‌ ಮನುಷ್ಯನ ದೇಹ ಸೇರುತ್ತದೆ. ಹೀಗೆ ಮನುಷ್ಯನ ದೇಹ ಸೇರಿದ ನಿಫಾ ವೈರಸ್‌, ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಹೋಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

Share Post