ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ನಿವಾಸಕ್ಕೆ ಚಿನ್ನಮ್ಮ ಶಶಿಕಲಾ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಜೈಲಿನಿಂದ ಬಿಡುಗಡೆಯಾದ ಮೇಲೆ ರಾಜಕೀಯದಿಂದ ದೂರವುಳಿದಿದ್ದ ಶಶಿಕಲಾ ಇದೀಗ ಮತ್ತೆ ತಮಿಳುನಾಡಿನಲ್ಲಿ ಸುದ್ದಿ ಮಾಡುತ್ತಿದ್ದಾರೆ. ಈ ಬೆನ್ನಲ್ಲೇ ಶಶಿಕಲಾ, ರಜಿನಿಕಾಂತ್‌ರನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.