National

ಪಂಜಾಬ್‌ನಲ್ಲಿ ಹೊತ್ತಿ ಉರಿದ ಗುಡಿಸಲು; ಮನೆಯಲ್ಲಿ ಏಳು ಮಂದಿ ಸಜೀವ ದಹನ

ಲುಧಿಯಾನ: ಗುಡಿಸಲೊಂದಕ್ಕೆ ಬೆಂಕಿ ಬಿದ್ದು ಒಂದೇ ಕುಟುಂಬದ ಏಳು ಮಂದಿ ಸಜೀವದಹನವಾಗಿರುವ ಘಟನೆ ಪಂಜಾಬ್‌ನ ಲೂಧಿಯಾನದಲ್ಲಿ ನಡೆದಿದೆ. ಮೃತರೆಲ್ಲರೂ ವಲಸೆ ಕಾರ್ಮಿಕರೆಂದು ಗೊತ್ತಾಗಿದೆ. ಇವರು ಟಿಬ್ಬಾ ರಸ್ತೆಯ ಕಸದ ಡಂಪಿಂಗ್‌ ಯಾರ್ಡ್‌ ಬಳಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದರು. ರಾತ್ರಿ ಆ ಗುಡಿಸಲಿಗೆ ಬೆಂಕಿ ಬಿದ್ದಿದ್ದು, ಮನೆಯಲ್ಲಿದ್ದ ಏಳೂ ಮಂದಿ ಸಾವನ್ನಪ್ಪಿದ್ದಾರೆ.

ಘಟನೆ ಆಕಸ್ಮಿಕವೋ ಅಥವಾ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡರೋ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಟಿಬ್ಬಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

Share Post