National

ಚೀನಾ ನಿರ್ಮಿತ ಡ್ರೋನ್ ಹೊಡೆದುರುಳಿಸಿದ BSF

ನವದೆಹಲಿ : ಪಂಜಾಬ್‌ನ ಭಾರತ-ಪಾಕಿಸ್ತಾನ ಗಡಿಯಲ್ಲಿ ಕಾಣಿಸಿಕೊಂಡ ಚೀನಾ ನಿರ್ಮಿತ ಡ್ರೋನ್‌ ಅನ್ನು ಬಿ.ಎಸ್.ಎಫ್‌ ಹೊಡೆದುರುಳಿಸಿದೆ. ಪಾಕಿಸ್ತಾನದ ಕಡೆಯಿಂದ ಒಳಬರಲು ಪ್ರಯತ್ನಿಸಿತ್ತು ಎಂದು ವರದಿಯಾಗಿದೆ.

ಚೀನಾ ನಿರ್ಮಿತ ಡ್ರೋನ್‌ ಒಂದು ಶುಕ್ರವಾರ ರಾತ್ರಿ ಪಂಜಾಬ್‌ನ ಫಿರೋಜ್‌ಪುರ್‌ ಗಡಿಯ ಬಳಿ ಕಾಣಿಸಿಕೊಂಡಿದೆ. ರಾತ್ರಿ ಸುಮಾರು 11.10  ಸುಮಾರಿಗೆ ಡ್ರೋನ್‌ ಅನ್ನು ಹೊಡೆದುರುಳಿಸಲಾಯಿತು. ಘಟನಾ ಸ್ಥಳಕ್ಕೆ ಬಿ.ಎಸ್ಎಫ್‌ ಅಧಿಕಾರಿಗಳು ತಲುಪಿದ್ದು, ತನಿಖೆ ನಡೆಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

Share Post