Crime

ಶಿವಣ್ಣ-ಪ್ರಭುದೇವ ನಟನೆಯಲ್ಲಿ ಹೊಸ ಸಿನಿಮಾ; ಯೋಗರಾಜ್‌ ಭಟ್‌ ನಿರ್ದೇಶನ

ಬೆಂಗಳೂರು; ಶಿವರಾಜ್‌ ಕುಮಾರ್‌ ಹೊಸ ಸಿನಿಮಾಗೆ ಯೋಗರಾಜ್‌ ಭಟ್‌ ಆಕ್ಷನ್‌ ಕಟ್‌ ಹೇಳುತ್ತಿದ್ದು, ಹ್ಯಾಟ್ರಿಕ್‌ ಹೀರೋ ಜೊತೆ ಡ್ಯಾನ್ಸಿಂಗ್‌ ಸ್ಟಾರ್‌ ಪ್ರಭುದೇವ ನಟಿಸುತ್ತಿರುವುದು ಈ ಚಿತ್ರದ ವಿಶೇಷ. ಈ ಚಿತ್ರವನ್ನು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ ಮಾಡುತ್ತಿದ್ದಾರೆಂದು ತಿಳಿದುಬಂದಿದೆ. 

ಸಿನಿಮಾ ಬಗ್ಗೆ ನಿರ್ದೇಶಕ ಯೋಗರಾಜ್ ಭಟ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  ಸದ್ಯದಲ್ಲೇ  ಸಿನಿಮಾಗೆ ಚಾಲನೆ ದೊರೆಯಲಿದೆ. ಶಿವರಾಜ್ ಕುಮಾರ್ ಮನೆಯಲ್ಲಿ ಭೇಟಿಯಾದ ಫೋಟೋವನ್ನು ಯೋಗರಾಜ್‌ ಭಟ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಯೋಗರಾಜ್ ಭಟ್ ಗರಡಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಗಾಳಿಪಟ 2 ಸಿನಿಮಾ ಕೂಡಾ ರಿಲೀಸ್‌ಗೆ ಸಿದ್ಧವಾಗಿದೆ. ನಟ ಶಿವರಾಜ್ ಕುಮಾರ್ ಕೂಡ ತಮ್ಮದೇ ನಿರ್ಮಾಣದ ವೇದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಎರಡೂ ಸಿನಿಮಾಗಳ ಕೆಲಸಗಳ ಮುಂದಿನ ತಿಂಗಳು ಒಂದು ಹಂತಕ್ಕೆ ಬರಲಿವೆ. ಇದರ ನಂತರ ಅಂದರೆ ಜೂನ್‌ ಕೊನೆಯಲ್ಲಿ ಹೊಸ ಸಿನಿಮಾ ಶೂಟಿಂಗ್‌ ಶುರುವಾಗುವ ಸಾಧ್ಯತೆ ಇದೆ.

 

Share Post