National

ಹೆಲಿಕಾಪ್ಟರ್‌ ದುರಂತದ ಬಗ್ಗೆ ಮಾಹಿತಿ ನೀಡಿದ ರಕ್ಷಣ ಸಚಿವ ರಾಜನಾಥ್‌ ಸಿಂಗ್

ನವದೆಹಲಿ : ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಲೋಕಸಭೆಯಲ್ಲಿ ದುರಂತದ ಕುರಿತು ಮಾಹಿತಿ ನೀಡಿದ್ದಾರೆ. ಜನರಲ್ ರಾವತ್ ಅವರು ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸಿಬ್ಬಂದಿ ಕಾಲೇಜಿಗೆ ನಿಗದಿತ ಭೇಟಿಯಲ್ಲಿದ್ದರು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲೋಕಸಭೆಗೆ ತಿಳಿಸಿದರು. 12.18ಕ್ಕೆ ಸೂಲೂರು ಹೆಲಿಪ್ಯಾಡ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಸಂಪರ್ಕ ಕಳೆದುಕೊಂಡಿತು. ಸ್ಥಳೀಯರು ಸ್ಥಳಕ್ಕೆ ಧಾವಿಸಿ ನೋಡಿದಾಗ ಹೆಲಿಕಾಪ್ಟರ್ ಹೊತ್ತಿ ಉರಿದಿತ್ತು. ಸ್ಥಳೀಯ ಅಧಿಕಾರಿಗಳು ತಮ್ಮಿಂದ ಸಾಧ್ಯವಿರುವ ಕ್ರಮಗಳನ್ನು ತೆಗೆದುಕೊಂಡರು ಮತ್ತು ಅವರನ್ನು ವೆಲ್ಲಿಂಗ್ಟನ್‌ನ ಹತ್ತಿರದ ಆಸ್ಪತ್ರೆಗೆ ಸೇರಿಸಿದರು. 
ವಿಮಾನದಲ್ಲಿದ್ದ 14 ಜನರಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ ಎಂದು ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ. "ಇಂದು ಸಂಜೆಯೊಳಗೆ ಅವರ ಎಲ್ಲಾ ಮೃತದೇಹಗಳನ್ನು ದೆಹಲಿಗೆ ತರಲಾಗುವುದು. ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಆಸ್ಪತ್ರೆಯ ಆರೈಕೆಯಲ್ಲಿದ್ದಾರೆ. ಜನರಲ್ ರಾವತ್ ಅವರನ್ನು ಸಂಪೂರ್ಣ ಮಿಲಿಟರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಇತರರಿಗೂ ಸೂಕ್ತ ಮಿಲಿಟರಿ ಗೌರವಗಳನ್ನು ನೀಡಲಾಗುವುದು." ಎಂದು ತಿಳಿಸಿದರು

 

Share Post