ಹಳೇ ಬಜೆಟ್ ಪ್ರತಿ ಓದಿ ಪೇಚಿಗೆ ಸಿಲುಕಿದ ರಾಜಸ್ಥಾನ ಸಿಎಂ
ಜೈಪುರ; ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ 2022-23ನೇ ಸಾಲಿನ ಹಳೆದ ಬಜೆಟ್ ಪ್ರತಿ ಓದಿ ಅಪಹಾಸ್ಯಕ್ಕೆ ಒಳಗಾಗಿದ್ದಾರೆ. 2023-24ನೇ ಸಾಲಿನ ಬಜೆಟ್ ಮಂಡಿಸುವ ಹಳೆ ಬಜೆಟ್‌ನ್ನು ಎಂಟು ನಿಮಿಷಗಳ ಕಾಲ ಓದಿದ್ದಾರೆ. ಅನಂತರ ಅವರಿಗೆ ತಪ್ಪಿನ ಅರಿವಾಗಿದೆ.
ಇಂದು ರಾಜಸ್ಥಾನ ಬಜೆಟ್ ಮಂಡಿಸಲಾಯ್ತು. ಈ ವೇಳೆ ಈ ಯಡವಟ್ಟು ನಡೆದಿದೆ. ಅದರ ವಿಡಿಯೋ ಈಗ ವೈರಲ್ ಆಗುತ್ತಿದೆ. 8 ನಿಮಿಷಗಳ ಕಾಲ ಬಜೆಟ್ ಓದಿದ ನಂತೆ ಗೆಹ್ಲೋಟ್‌ಗೆ ಸಚಿವ ಮಹೇಶ್ ಜೋಶಿ ತಪ್ಪು ಓದುತ್ತಿದ್ದೀರಿ ಎಂದು ಹೇಳಿದರು. ಆಗ ಅಶೋಕ್ ಗೆಹ್ಲೋಟ್ ಅವ್ರು ಭಾಷಣ ನಿಲ್ಲಿಸಿದರು. ನಂತರ ಹೊಸ ಪ್ರತಿ ಓದಿದರು.