ಬಿಜೆಪಿ ಸಂಸದರತ್ತ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್; ಹೊಸ ವಿವಾದ
ನವದೆಹಲಿ; ಸಂಸತ್ ಸ್ಥಾನ ಮರಳಿ ಬಂದ ಮೇಲೆ ರಾಹುಲ್ ಗಾಂಧಿ ಮೊದಲ ಬಾರಿಗೆ ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಅನಂತರ ಅವರು ನಿರ್ಗಮಿಸುವ ವೇಳೆ ಬಿಜೆಪಿ ಸಂಸದರ ಕಡೆಗೆ ಫ್ಲೈಯಿಂಗ್ ಕಿಸ್ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ. ಮಹಿಳಾ ಸಂಸದರ ಕಡೆ ನೋಡಿ ಫ್ಲೈಯಿಂಗ್ ಕೊಟ್ಟಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಆರೋಪ ಮಾಡಿದ್ದಾರೆ.
ಅವಿಶ್ವಾಸ ನಿರ್ಣಯದ ಪರವಾಗಿ ರಾಹುಲ್ ಗಾಂಧಿ ಮಾತನಾಡಿದರು. ಅನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಮಾತು ಶುರು ಮಾಡಿದರು. ಈ ವೇಳೆ ರಾಹುಲ್ ಗಾಂಧಿಯವರು ಸದನದಿಂದ ನಿರ್ಗಮಿಸಿದರು. ಈ ವೇಳೆ ಅವರ ಕೈಯಲ್ಲಿದ್ದ ಫೈಲ್‌ಗಳನ್ನು ಬೀಳಿಸಿದ್ದಾರೆ. ಅದನ್ನು ಎತ್ತಿಕೊಳ್ಳುವ ವೇಳೆ ಕೆಲ ಬಿಜೆಪಿ ಸಂಸದರು ನಗಾಡಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಫ್ಲೈಯಿಂಗ್ ಕಿಸ್ ಹೊರಹೋಗಿದ್ದಾರೆ.
ಆದ್ರೆ ಈ ದೃಶ್ಯಗಳು ಯಾವುದೇ ಕ್ಯಾಮರಾದಲ್ಲಿ ಸೆರೆಯಾಗಿಲ್ಲ. ಆದ್ರೆ ಮಹಿಳಾ ಸಂಸದರ ಕಡೆಯೇ ಫ್ಲೈ ಕಿಸ್ ನೀಡಿದ್ದಾರೆ. ಈ ಮೂಲಕ ಅನುಚಿತವಾಗಿ ವರ್ತಿಸಿದ್ದಾರೆ. ಸ್ತ್ರೀದ್ವೇಷದ ಪುರುಷರು ಮಾತ್ರ ಇಂತಹ ವರ್ತನೆ ತೋರಲು ಸಾಧ್ಯ ಎಂದು ಸ್ಮೃತಿ ಇರಾನಿ ಆಕ್ರೋಶ ಹೊರಹಾಕಿದ್ದಾರೆ.