ಭದ್ರತಾಲೋಪ: ಒಂದೇ ದಿನದಲ್ಲಿ ಪಂಜಾಬ್ ಸರ್ಕಾರದ ವರದಿ ರೆಡಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಂಜಾಬ್ ಭೇಟಿ ವೇಳೆ ಆದ ಭದ್ರತಾ ಲೋಪದ ಬಗ್ಗೆ ತನಿಖೆ ನಡೆಸಲು ನಿನ್ನೆಯಷ್ಟೇ ಪಂಜಾಬ್ ಸರ್ಕಾರ ಸಮಿತಿಯೊಂದರನ್ನು ರಚನೆ ಮಾಡಿತ್ತು. ಆ ಸಮಿತಿ ಒಂದೇ ದಿನದಲ್ಲಿ ವರದಿ ಸಿದ್ಧಪಡಿಸಿದ್ದು, ಕೇಂದ್ರ ಗೃಹ ಇಲಾಖೆಗೆ ವರದಿ ಸಲ್ಲಿಕೆ ಮಾಡಿದೆ.
ಪ್ರಧಾನಿ ಭೇಟಿ ವೇಳೆ ಆದ ಭದ್ರತಾ ಲೋಪಕ್ಕೆ ಪಂಜಾಬ್ ಸರ್ಕಾರವೇ ಕಾರಣ ಎಂದು ಆರೋಪಿಸಲಾಗಿತ್ತು. ಸೂಕ್ತ ಭದ್ರತಾ ವ್ಯವಸ್ಥೆ ಒದಗಿಸದ ಕಾರಣದಿಂದಾಗಿಯೇ ಹೀಗೆ ನಡೆದಿದೆ ಎಂದು ಹೇಳಲಾಗಿತ್ತು. ಆದ್ರೆ, ಪಂಜಾಬ್ ಸರ್ಕಾರದ ಸಿದ್ಧಪಡಿಸಿದ ವರದಿಯಲ್ಲಿ ಇದನ್ನು ನಿರಾಕರಿಸಲಾಗಿದೆ. ಮೋದಿ ಬರುವ ವೇಳೆ ಸಾಕಷ್ಟು ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೇಕಾದಷ್ಟು ಭದ್ರರಾ ಸಿಬ್ಬಂದಿಯನ್ನು ಕೂಡಾ ನೇಮಿಸಲಾಗಿತ್ತು ಎಂದು ಪಂಜಾಬ್ ಸರ್ಕಾರ ತನ್ನ ವರದಿಯಲ್ಲಿ ಹೇಳಿದೆ. ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಅನಿರುದ್ಧ್ ತಿವಾರಿ ಈ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದಾರೆ.
ಈ ಸಮಿತಿಯಲ್ಲಿ ಪಂಜಾಬ್ ಸರ್ಕಾರದ ಸಂಪುಟದ ಭದ್ರತಾ ಕಾರ್ಯದರ್ಶಿ ಸುಧೀರ್ ಕುಮಾರ್, ಇಂಟೆಲಿಜೆನ್ಸ್ ಬ್ಯೂರೋನ ಜಂಟಿ ಕಾರ್ಯದರ್ಶಿ ಬಲ್ಬೀರ್ ಸೀಂಗ್ ಹಾಗೂ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್‌ನ ಐಜಿ ಸುರೇಶ್ ಇದ್ದರು.