National

100ಕಿಸಾನ್‌ ಡ್ರೋಣ್‌ಗಳಿಗೆ ಪ್ರಧಾನಿ ಮೋದಿ ಚಾಲನೆ-ಹೊಸ ಕ್ರಾಂತಿಯತ್ತ ಕೃಷಿ

ದೆಹಲಿ: ಬೆಳೆ ಬೆಳೆಯುವ ರೈತರು ಕೀಟನಾಶಕ ಸಿಂಪಡಣೆ ಮಾಡಲು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾಗಿ ಇದಕ್ಕೊಂದು ಮುಕ್ತಿ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡು, ಹೊಸ ಕಾರ್ಯಕ್ರಮಕ್ಕೆ ಕೈ ಹಾಕಿದೆ. ಬೆಳಗಳನ್ನು ಉಳಿಸಿಕೊಳ್ಳಲು ಕೀಟನಾಶಕವನ್ನು ಸಿಂಪಡಿಸಲು ದೇಶದಾದ್ಯಂತ ಡ್ರೋನ್‌ಗಳನ್ನು ಬಿಡುಗಡೆ ಮಾಡಲಾಗಿದೆ. . ಪ್ರಧಾನಿ ನರೇಂದ್ರ ಮೋದಿ ಅವರು ಇಂದು 100 ಕಿಸಾನ್ ಡ್ರೋನ್‌ಗಳಿಗೆ ಚಾಲನೆ ನೀಡಿದ್ದಾರೆ.  ವಿವಿಧ ನಗರಗಳು ಮತ್ತು ಪಟ್ಟಣಗಳಲ್ಲಿ ಈ ಕಾರ್ಯಕ್ರಮ ಚಾಲನೆ ಆಯಿತು.

ಡ್ರೋಣ್‌ಗಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಡ್ರೋನ್‌ಗಳ ಮೂಲಕ ಹೊಲಗಳಲ್ಲಿ ಕೀಟನಾಶಕಗಳನ್ನು ಸಿಂಪಡಿಸಬಹುದು.  ಕೃಷಿಯಲ್ಲಿ ಡ್ರೋನ್‌ಗಳ ಬಳಕೆ ಹೊಸ ನಾಂದಿ ಹಾಡಲಿದೆ ಎಂದರು.  ಎರಡು ವರ್ಷಗಳಲ್ಲಿ ಏರೋಸ್ಪೇಸ್ ಅಡಿಯಲ್ಲಿ ಒಂದು ಲಕ್ಷ ಮೇಡ್ ಇನ್ ಇಂಡಿಯಾ ಡ್ರೋನ್‌ಗಳನ್ನು ತಯಾರಿಸುವ ಗುರಿಯನ್ನು ಹೊಂದಿದೆ ಎಂದು ಮೋದಿ ತಿಳಿಸಿದ್ರು.  ಡ್ರೋನ್‌ಗಳ ತಯಾರಿಕೆಯಿಂದ ಯುವಕರಿಗೆ ಉದ್ಯೋಗ ಮತ್ತು ಹೊಸ ಅವಕಾಶಗಳನ್ನು ಒದಗಿಸುತ್ತವೆ ಎಂಬ ಆಶಾಭಾವನೆಯನನು ವ್ಯಕ್ತಪಡಿಸಿದ್ರು.

ರೈತರಿಗೆ ಕೂಡ ಇದರಿಂದ ಹೆಚ್ಚಿನ ಸಹಕಾರ ಉಂಟಾಗಲಿದೆ. 2022-23ರ ಆರ್ಥಿಕ ವರ್ಷದಲ್ಲಿ ದೇಶದಾದ್ಯಂತ ರೈತರಿಗೆ ಡಿಜಿಟಲ್ ಮತ್ತು ಹೈಟೆಕ್ ತಂತ್ರಜ್ಞಾನವನ್ನು ಒದಗಿಸಲು ಕೇಂದ್ರ ಸರ್ಕಾರವು ಕಾರ್ಯನಿರ್ವಹಿಸುತ್ತಿದೆ. ಕಿಸಾನ್ ಡ್ರೋನ್‌ಗಳು, ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುತ್ತಿದೆ. ಬಜೆಟ್ ಮಂಡನೆ ವೇಳೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯವನ್ನು ಘೋಷಣೆ ಮಾಡಿದ್ದರು. ಅದನ್ನು ಚಾಲನೆ ನೀಡಿದ್ದೇವೆ ಎಂದು ಮೋದಿ ಸಂತಸಪಟ್ಟರು.

Share Post