National

ಪಂಜಾಬ್‌ನಲ್ಲಿ ಕಾಂಗ್ರೆಸ್‌ಗೆ ಮುಖಭಂಗ; ಸಿಎಂ ಸೇರಿ 12 ಸಚಿವರಿಗೆ ಹಿನ್ನಡೆ

ಪಂಜಾಬ್‌ ಚುನಾವಣೆಯಲ್ಲಿ ಎಎಪಿ ನಾಗಾಲೋಟ ಮುಂದುವರೆದಿದೆ. ಅರವಿಂದ್‌ ಕೇಜ್ರಿವಾಲ್‌ ಜನಾಭಿಪ್ರಾಯದ ಮೇಲೆ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ಪರಿಣಾಮವೋ ಏನೋ ಎಎಪಿಗೆ ಜನ ಉತ್ತಮವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.

ಸಿಎಂ ಚರಣ್‌ಜೀತ್‌ ಸಿಂಗ್‌ ಅವರು ಎರಡು ಕಡೆ ಸ್ಪರ್ಧೆ ಮಾಡಿದ್ದರು. ಎರಡೂ ಕಡೆ ಅವರು ಹಿನ್ನೆಡೆ ಅನುಭವಿಸುತ್ತಿದ್ದಾರೆ. ಇದರ ಜೊತೆಗೆ ಚರಣ್‌ ಜೀತ್‌ ಸಿಂಗ್‌ ಸಂಪುಟದ 12 ಸಚಿವರು ಕೂಡಾ ಹಿನ್ನಡೆ ಅನುಭವಿಸಿದ್ದಾರೆ.

ಪಂಜಾಬ್‌
117 ಸ್ಥಾನ \ ಮ್ಯಾಜಿಕ್‌ ನಂಬರ್‌ 59

ಕಾಂಗ್ರೆಸ್‌ – 13
ಎಎಪಿ – 88
ಶಿರೋಮಣಿ ಅಕಾಲಿ ದಳ – 8
ಬಿಜೆಪಿ – 05

 

Share Post