Bengaluru

ಪಿಎಂಗೆ ರಾಜ್ಯದ ಕೊರೊನಾ ಪರಿಸ್ಥಿತಿ ಬಗ್ಗೆ ವರದಿ ನೀಡಿದ ಸಿಎಂ

ಬೆಂಗಳೂರು: ಕೊರೊನಾ ಕೇಸ್‌ಗಳಿ ವೇಗವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆ ವರದಿ ಮತ್ತು ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿ ಸೂಕ್ತ ಸಲಹೆ ನೀಡಲು ಪ್ರಧಾನಿ ನರೇಂದ್ರ ಮೋದಿಯವರು ಇಂದು ವಿಡಿಯೋ ಕಾನ್ಫರೆನ್ಸ್‌ ಮೂಲಕ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ್ರು. ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಮುಖ್ಯಮಂತ್ರಿ ಭಾಗವಹಿಸಿ ರಾಜ್ಯದಲ್ಲಿ ಕೊರೊನಾ ಸ್ಥಿತಿ-ಗತಿ ಬಗ್ಗೆ ವಿವರಣೆಯನ್ನು ನೀಡಿದ್ರು.

ಇದಕ್ಕೂ ಮುನ್ನ ಪೂರ್ವಭಾವಿ ಸಭೆ ನಡೆಸಿ ಪ್ರಧಾನಿಯವರಿಗೆ ತಿಳಿಸಬೇಕಾದ ಮಾಹಿತಿಯನ್ನು ಕಲೆ ಹಾಕಿದ್ರು. ಪ್ರತ್ಯೇಕವಾಗಿ ನಡೆಸಿದ ಸಭೆಯಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌, ಸಿ.ಎಸ್.ರವಿಕುಮಾರ್‌, ಹಿರಿಯ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿ ಸಿಎಂಗೆ ಮಾಹಿತಿ ನೀಡುವಲ್ಲಿ ನೆರವಾದ್ರು.

ನರೇಂದ್ರ ಮೋದಿಗೆ ಸಿಎಂ ನೀಡಿದ ಮಾಹಿತಿ

೧. ರಾಜ್ಯದ ಏರ್​ಪೋರ್ಟ್, ಗಡಿಭಾಗಗಳಲ್ಲಿ ನಿಗಾ ಇಡಲಾಗಿದೆ

೨. ಎಲ್ಲಾ ಕಡೆ ಪರಿಣಾಮಕಾರಿಯಾಗಿ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ.

೩.  ರಾಜ್ಯದಲ್ಲಿ ನೈಟ್​ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ.

೪. ಆಸ್ಪತ್ರೆಗಳಲ್ಲಿ ಬೆಡ್​ ಸಂಖ್ಯೆಯನ್ನು ಹೆಚ್ಚಿಸಲಾಗಿದೆ

೫. ಐಸಿಯು, ವೆಂಟಿಲೇಟರ್​ ವ್ಯವಸ್ಥೆಯಿರುವ ಬೆಡ್​ಗಳಿಗೆ ಆದ್ಯತೆ

೬. ಹೋಮ್​ ಐಸೋಲೇಷನ್​ನಲ್ಲಿರುವವರ ಆರೋಗ್ಯ ವಿಚಾರಣೆ ಮಾಡಲಾಗುತ್ತೆ

೭. ಟೆಲಿಕಾಲ್ ಮೂಲಕ ಸೋಂಕಿತರ ಆರೋಗ್ಯ ವಿಚಾರಿಸಲಾಗುತ್ತಿದೆ.

೮. ಅಧಿಕ ಸಂಖ್ಯೆಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ನಿಯೋಜನೆ

೯. ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ತೆರೆಯಲಾಗಿದೆ

೧೦. ಲಸಿಕಾ ಅಭಿಯಾನ ಭರದಿಂದ ಸಾಗಿದೆ ಎಂಬ ಮಾಹಿತಿಯನ್ನು ನೀಡಿದ್ರು.

ಸಿಎಂ ನೀಡಿದ ವರದಿ ಬಳಿಕ ಕೆಲ ಸಲಹೆಗಳನ್ನು ಪ್ರಧಾನಿ ಮೋದಿಯವರು ನೀಡಿದ್ರು. ಅವಶ್ಯಕತೆ ಇದ್ರೆ ಮಾತ್ರ ಆಸ್ಪತ್ರೆಗೆ ದಾಖಲಿಸಿ, ಹೋಂ ಐಸೋಲೇಷನ್‌ಗೆ ಹೆಚ್ಚಿನ ಒತ್ತು ನೀಡಿ, ಟ್ರೇಸಿಂಗ್‌, ಟ್ರ್ಯಾಕಿಂಗ್‌, ಹೆಚ್ಚಿನ ಪರೀಕ್ಷೆ ನಡೆಸಿ, ಕೊರೊನಾ ಹೆಚ್ಚಾಗಿರುವ ಕಡೆ ಲಸಿಕೆಯನ್ನು ನೀಡುವ ಕಾರ್ಯ ಹೆಚ್ಚಾಗಲಿ. ಜನರ ಆರೋಗ್ಯದ ಕಡೆ ಗಮನ ಕೊಟ್ಟು ಕೆಲಸ ಮಾಡಿ ಎಂಬ ಸೂಚನೆಗಳನ್ನು ಸಭೆಯಲ್ಲಿ ನೀಡಿದ್ರು.

Share Post