National

ಹಿಗ್ಗುತ್ತಿದೆ ಕೇಜ್ರಿವಾಲ್‌ ಶಕ್ತಿ; ಪಂಜಾಬ್‌ನಲ್ಲಿ ಆಮ್‌ ಆದ್ಮಿ ಗೆಲುವಿಗೆ ಕಾರಣಗಳೇನು..?

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸುತ್ತಿದೆ. ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ಮಕಾಡೆ ಮಲಗಿದೆ. ಶಿರೋಮಣಿ ಅಕಾಲಿದಳ ಕೂಡಾ ಸಿಂಗಲ್‌ ಡಿಜಿಟ್‌ಗೆ ತೃಪ್ತಿಪಟ್ಟುಕೊಳ್ಳುತ್ತಿದೆ. ಹೀಗಾಗಿ ಎಎಪಿಯ ಭಗವಂತ್‌ ಮಾನ್‌ ಅವರು ಸಿಎಂ ಆಗೋದು ಪಕ್ಕಾ ಆಗಿದೆ.

ಕಡಿಮೆ ಸಮಯದಲ್ಲಿ ಎಎಪಿ ದೇಶದ ಜನ ಪ್ರೀತಿ ಗಳಿಸುತ್ತಿದ್ದು, ವಿವಿಧ ರಾಜ್ಯಗಳಿಗೆ ವಿಸ್ತಾರಗೊಳ್ಳುತ್ತಿದೆ. ಕೇಜ್ರಿವಾಲ್‌ ಶಕ್ತಿ ಹಿಗುತ್ತಿದೆ. ಒಟ್ಟು 117 ಕ್ಷೇತ್ರಗಳಿರುವ ಪಂಜಾಬ್‌ನಲ್ಲಿ ಎಎಪಿ ಭರ್ಜರಿ ಬಹುಮತ ಪಡೆಯುತ್ತಿದೆ.

ಪಂಜಾಬ್‌ನಲ್ಲಿ ಎಎಪಿಗೆ ಇಷ್ಟು ದೊಡ್ಡ ಬಹುಮತಕ್ಕೆ ಕಾರಣಗಳೇನು..?

೧. ಕಾಂಗ್ರೆಸ್‌ ಪಕ್ಷದಲ್ಲಿ ನಾಯಕತ್ವದ ತಿಕ್ಕಾಟ

೨. ಪಂಜಾಬ್‌ ರೈತರು ಕಾಂಗ್ರೆಸ್‌ ಪಕ್ಷವನ್ನು ನಂಬದಿದ್ದದ್ದು

೩. ದೆಹಲಿಯಲ್ಲಿ ಎಎಪಿ ಪಕ್ಷ ನಡೆಸುತ್ತಿರುವ ಜನಪರ ಕಾರ್ಯಕ್ರಮಗಳು

೪. ಶಿಕ್ಷಣ, ಆರೋಗ್ಯ, ನೀರು, ವಿದ್ಯುತ್‌ ಸೇರಿ ಮೂಲ ಸೌಕರ್ಯಗಳಿಗೆ ಎಎಪಿ ಒತ್ತು ಕೊಟ್ಟಿರುವುದು

೫. ಜನರಿಂದ ಅಭಿಪ್ರಾಯ ಸಂಗ್ರಹಿಸಿ ಸಿಎಂ ಅಭ್ಯರ್ಥಿ ಆಯ್ಕೆ ಮಾಡಿದ್ದ ಕೇಜ್ರಿವಾಲ್‌

೬. ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗೆದ್ದಿದ ಎಎಪಿ

೭. ರೈತ ವಿರೋಧ ಕಾನೂನುಗಳಿಂದಾಗಿ ಬಿಜೆಪಿ ವಿರುದ್ಧವಿದ್ದ ಪಂಜಾಬ್‌ ರೈತರು

೮. ರೈತರಿಗೆ ಪರ್ಯಾಯವಾಗಿ ಕಂಡ ಪಕ್ಷವೇ ಆಮ್‌ ಆದ್ಮಿ ಪಾರ್ಟಿ

Share Post