ಮನೆಯ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸಿದರೆ ಬೀಳುತ್ತೆ ದಂಡ !
ದುಬೈ: ಹಳ್ಳಿಗಳಲ್ಲಿ ನಾವು ಮನೆಯ ಅಂಗಳದ ಎಲ್ಲೆಂದರಲ್ಲಿ ಬಟ್ಟೆಗಳನ್ನು ಒಣಗಿಸುತ್ತೇವೆ. ಆದರೆ ನಗರದಲ್ಲಿ ಮಾತ್ರ ಹಾಗಲ್ಲ ಮನೆಯ ಸುತ್ತಮುತ್ತ ಸ್ವಲ್ಪ ಜಾಗ ಸಿಕ್ಕಿದ್ರೂ ಹಾಕುತ್ತೇವೆ. ಇನ್ನು ಅಪಾರ್ಟ್ ಮೆಂಟ್ ನಲ್ಲಿ ಹೇಳಬೇಕಾ ಬಾಲ್ಕನಿ ಸುತ್ತ ಬಟ್ಟೆ ಒಣಗಿಸುತ್ತಾರೆ. ಆದರೆ ಕೆಲ ಅಪಾರ್ಟ್ ಮೆಂಟ್ ಅದು ಬಿಡುವುದಿಲ್ಲ. ಇದೀಗ ಇಲ್ಲೊಂದು ನಗರದಲ್ಲಿ ಬಾಲ್ಕನಿಯಲ್ಲಿ ಬಟ್ಟೆ ಒಣಗಿಸುವ ಹಾಗೆ ಇಲ್ಲ. ಒಂದು ವೇಳೆ ಅಪ್ಪಿತಪ್ಪಿ ಬಟ್ಟೆ ಒಣಗಿಸಿದರೆ, ಬೀಳುತ್ತೆ ನಿಮ್ಮ ಜೇಬಿಗೆ ಕತ್ತರಿ.
ಹೌದು ದುಬೈ ನಗರ ಸ್ವಚ್ಛತೆಗಾಗಿ ಕೆಲವು ಕಟ್ಟುನಿಟ್ಟಿನ ಕ್ರಮವನ್ನು ಜಾರಿಗೊಳಿಸಿದ್ದಾರೆ. ಜನರು ತಮ್ಮ ಬಾಲ್ಕನಿಯಲ್ಲಿ ಅಥವಾ ಮನೆಯ ಕಿಟಕಿಯ ಮೇಲೆ ಬಟ್ಟೆಗಳನ್ನು ಒಣಗಿಸಬಾರದೆಂದು ಎಂಬ ನಿಯಮ ಹೊರಡಿಸಿದ್ದಾರೆ. ಅಷ್ಟೆ ಅಲ್ಲದೇ ಬಾಲ್ಕನಿಯಲ್ಲಿ ಪಕ್ಷಿ ಹುಳಗಳನ್ನು ಇರಬಾರದು ಎಂದು ದುಬೈ ಮುನ್ಸಿಪಾಲಿಟಿ ಹೇಳಿದೆ. ಒಂದು ವೇಳೆ ಹಾಗೆ ಏನಾದ್ರೂ ಮಾಡಿರುವುದು ಕಂಡುಬಂದರೆ ತಕ್ಷಣ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಇನ್ನು ಬಾಲ್ಕನಿಯಲ್ಲಿ ಸಿಗರೇಟ್ ಸೇದಿರುವ ಬೂದಿ ಬಿದ್ದರೆ ಅಂಥವರಿಗೆ ದಂಡ ವಿಧಿಸಲಾಗಿದೆ. ಈ ಕುರಿತು ದುಬೈ ಮುನ್ಸಿಪಾಟಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.
ನಿಯಮ ಉಲ್ಲಂಘಿಸಿದರೆ ಒಬ್ಬರಿಗೆ ೫೦೦ ರಿಂದ ೧.೫೦೦ ವರೆಗೆ ಪಾವತಿಸಬೇಕು.