National

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಗದ್ದಲ; ಬಿಜೆಪಿ ಶಾಸಕನಿಗೆ ತೀವ್ರ ಗಾಯ

ಕೋಲ್ಕತ್ತ: ಬಿರ್ಭುಮ್ ಜಿಲ್ಲೆಯ ನಡೆದ 8 ಜನರ ಸಜೀವ ದಹನ ಪ್ರಕರಣ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಸದನದಲ್ಲಿ ಈ ವಿಚಾರವಾಗಿ ಚರ್ಚೆ ನಡೆಯಬೇಕೆಂದು ಬಿಜೆಪಿ ಸದಸ್ಯರು ಪಟ್ಟು ಹಿಡಿದಿದ್ದರಿಂದ ಆಡಳಿತ ಪಕ್ಷ ಟಿಎಂಸಿ ಹಾಗೂ ಬಿಜೆಪಿ ಶಾಸಕರ ನಡುವೆ ಜಗಳ ನಡೆದಿದೆ. ಈ ವೇಳೆ ಕೆಲವು ಶಾಸಕರಿಗೆ ಗಾಯಗಳಾಗಿವೆ.

  ಘಟನೆಗೆ ಬಿಜೆಪಿಯೇ ಹೊಣೆ ಎಂದು ಟಿಎಂಸಿ ಆರೋಪಿಸಿದೆ. ಇದರಿಂದ ಸಭೆ ಒಮ್ಮೆಲೇ ಉದ್ವಿಗ್ನಗೊಂಡಿತು. ಉಭಯ ಪಕ್ಷಗಳ ಸದಸ್ಯರು ನೂಕಾಟ ತಳ್ಳಾಟ ನಡೆಸಿದರು. ಘಟನೆಯಲ್ಲಿ ಬಿಜೆಪಿ ಶಾಸಕ ಮಂಜುದಾರ್ ಅವರಿಗೆ ತೀವ್ರ ಗಾಯಗಳಾಗಿವೆ.  ಟಿಎಂಸಿ ಶಾಸಕರ ದಾಳಿಯಿಂದ ಅವರು ಗಾಯಗೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ತಮ್ಮ ಶಾಸಕರ ಮೇಲೆ ಹಲ್ಲೆ ನಡೆದಿದೆ ಎಂದು ಟಿಎಂಸಿ ಕೂಡಾ ಬಿಜೆಪಿ ವಿರುದ್ಧ ಆರೋಪ ಮಾಡಿದೆ. ಘಟನೆಯ ಬಗ್ಗೆ ಸ್ಪೀಕರ್ ಗಂಭೀರವಾಗಿದ್ದಾರೆ. ಸುವೆಂದು ಸೇರಿದಂತೆ ಐವರು ಬಿಜೆಪಿ ಶಾಸಕರನ್ನು ಸ್ಪೀಕರ್ ಅಮಾನತುಗೊಳಿಸಿದ್ದಾರೆ.

ಮತ್ತೊಂದೆಡೆ, ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ 8 ಜನರ ಸಜೀವ ದಹನ ಪ್ರಕರಣವನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಕರಣದಲ್ಲಿ ಇದುವರೆಗೆ 22 ಶಂಕಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ರಾಜ್ಯ ಪೊಲೀಸರು ಸಲ್ಲಿಸಿರುವ ಪಟ್ಟಿಯಲ್ಲಿನ ಹೆಸರುಗಳೂ ಸೇರಿವೆ ಎಂದು ಮೂಲಗಳು ತಿಳಿಸಿವೆ.

Share Post