BengaluruCrime

ಬಾಡಿಗೆಗಿದ್ದ ಪಶ್ಚಿಮ ಬಂಗಾಳದ ಯುವತಿ ಮೇಲೆ ಅತ್ಯಾಚಾರ; ಮಾಲೀಕನ ಬಂಧನ

ಬೆಂಗಳೂರು; ಮನೆಯಲ್ಲಿ ಬಾಡಿಗೆಗಿದ್ದ ಪಶ್ಚಿಮ ಬಂಗಾಳದ ಯುವತಿಗೆ ರಿವಾಲ್ವಾರ್‌ನಿಂದ ಬೆದರಿಸಿ ಮನೆ ಮಾಲೀಕ ಅತ್ಯಾಚಾವೆಸಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಅಶೋಕ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

     ಬಿಹಾರ‌ ಮೂಲದ ಬೆಂಗಳೂರು ನಿವಾಸಿ ಅನಿಲ್ ರವಿಶಂಕರ್ ಪ್ರಸಾದ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದ್ದು, ಕೋರ್ಟ್‌ ಮೂರು ದಿನ ಆರೋಪಿಯನ್ನು ಪೊಲೀಸ್‌ ಕಸ್ಟಡಿಗೆ ನೀಡಿದೆ. ಬಿಹಾರದ ಮೂಲದ ಆರೋಪಿ ಅನಿಲ್‌ ಬೆಂಗಳೂರಿನಲ್ಲಿ ಟೈಲ್ಸ್‌ ವ್ಯವಹಾರ ಮಾಡುತ್ತಾನೆ. ಈತನಿಗೆ ಸೇರಿದ ಕಟ್ಟಡದಲ್ಲಿ ಪಶ್ಚಿಮ ಬಂಗಾಳದ ಯುವತಿ ಮಾರ್ಚ್‌ನಿಂದ ಬಾಡಿಗೆಗಿದ್ದಾಳೆ. ಖಾಸಗಿ ಕಾಲೇಜೊಂದರ ವಿದ್ಯಾರ್ಥಿನಿಯಾಗಿರುವ ಈಕೆ ಮೇಲೆ ಮನೆ ಮಾಲೀಕ ಅನಿಲ್‌ ರಿವಾಲ್ವಾರ್‌ ತೋರಿಸಿ ಅತ್ಯಾಚಾರವೆಸಗಿದ್ದಾನೆ.

ಕೆಲ‌‌‌‌ವು ದಿನಗಳ ಹಿಂದೆ ಯುವತಿಯ ಮನೆಯಲ್ಲಿ ಆಕೆಯ ಸ್ನೇಹಿತನೊಬ್ಬ ಉಳಿದುಕೊಂಡಿದ್ದ.‌ ಇದನ್ನು ಗಮನಿಸಿದ ಮಾಲೀಕ ಮನೆಯಾಚೆ ನಿಲ್ಲಿಸಿದ್ದ ಸ್ನೇಹಿತನ ಬೈಕ್ ಅ​ನ್ನು ಲಾಕ್ ಮಾಡಿದ್ದಾನೆ.  ಮಾರನೇ‌‌ ದಿನ ಬೆಳಗ್ಗೆ ಪೊಲೀಸರು ಬಂದು ಲಾಕ್ ಮಾಡಿದ್ದಾರೆ. ಮನೆ ಬಾಡಿಗೆಗೆ ಕೊಟ್ಟರೆ ಇಲ್ಲಸಲ್ಲದ ಚಟುವಟಿಕೆ ನಡೆಸುತ್ತೀರಾ..? ಪೊಲೀಸರು ಬಂದರೆ ನಿಮ್ಮ‌ ಮೇಲೆ ಕೇಸ್ ದಾಖಲಿಸುತ್ತಾರೆ ಎಂದು ಯುವಕನಿಗೆ ಭಯ ಹುಟ್ಟಿಸಿದ್ದಾನೆ. ನಂತರ‌ ತಾನು‌ ಪೊಲೀಸರೊಂದಿಗೆ ಕೇಸ್ ದಾಖಲಿಸದಂತೆ ಮಾತನಾಡಿರುವುದಾಗಿ ಹೇಳಿ‌ ಅಲ್ಲಿಂದ ಹುಡುಗನನ್ನು ಕಳುಹಿಸಿದ್ದಾನೆ.

ಇದಾದ ಮೇಲೆ ಏಪ್ರಿಲ್‌ 11ರಂದು ಯುವತಿ ಇದ್ದ ಮನೆಗೆ ಹೋದ‌ ಮಾಲೀಕ ಅನಿಲ್‌ ತನ್ನ ಬಳಿಯಿದ್ದ ಲೈಸೆನ್ಸ್ಡ್‌ ರಿವಾಲ್ವರ್ ತಲೆಗಿಟ್ಟು ಬೆದರಿಸಿದ್ದಾನೆ. ತನ್ನೊಂದಿಗೆ ಸಹಕರಿಸುವಂತೆ ಒತ್ತಡ ಹೇರಿ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯದ ಬಗ್ಗೆ ಇತ್ತೀಚೆಗೆ‌ ಪೋಷಕರ ಬಳಿ ಯುವತಿ ಹೇಳಿಕೊಂಡಿದ್ದಾಳೆ.‌ ಪೋಷಕರು ಹೇಳಿದಂತೆ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಇದೀಗ ಬಂಧಿಸಲಾಗಿದೆ.

Share Post