ಗುಜರಾತ್‌ನಲ್ಲಿ ಆರು ಮಂದಿ ಪಾಕ್ ಮೀನುಗಾರರು ವಶಕ್ಕೆ:11ಬೋಟ್ ವಶಕ್ಕೆ
ಗುಜರಾತ್: ಭಾರತ-ಪಾಕ್(Indo-pak) ಸಮುದ್ರ ಗಡಿಯಲ್ಲಿರುವ ಹರಾಮಿ ನಾಲಾ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನದ ಮೀನುಗಾರಿಕಾ ದೋಣಿಗಳ ಒಳನುಸುಳುವಿಕೆ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಶುಕ್ರವಾರ ಆರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದೆ.
ಭಾರತೀಯ ಗಡಿ ಭದ್ರತಾ ಪಡೆ (ಫೆಬ್ರವರಿ 10, 2022) ನಡೆಸಿದ ಕಾರ್ಯಾಚರಣೆಯು ಉತ್ತಮ ಫಲಿತಾಂಶಗಳನ್ನು ನೀಡುತ್ತಿದೆ. ನಿನ್ನೆ ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನದ 11 ಖಾಲಿ ಬೋಟ್ ಗಳನ್ನು ಪತ್ತೆ ಹಚ್ಚಿದ ಬಳಿಕ ಬಿಎಸ್ ಎಫ್(BSF) ವಿಶೇಷ ಕಾರ್ಯಾಚರಣೆ ಆರಂಭಿಸಿತ್ತು. ಇದರ ಭಾಗವಾಗಿ, ಏರ್ ಕ್ರೀಕ್ ಕ್ರೊಕೊಡೈಲ್ ವಿಭಾಗದ ಕಮಾಂಡೋಗಳನ್ನು ವಿವಿಧ ಸ್ಥಳಗಳಲ್ಲಿ ನಿಯೋಜನೆ ಮಾಡಿತು. ಈ ಪ್ರಕ್ರಿಯೆಯಲ್ಲಿ ಭಾರತದಲ್ಲಿ ಅಡಗಿಕೊಂಡಿದ್ದ ಆರು ಪಾಕಿಸ್ತಾನಿ ಮೀನುಗಾರರನ್ನು ಗಡಿ ಭದ್ರತಾ ಪಡೆ ಸಿಬ್ಬಂದಿ ಬಂಧಿಸಿದ್ದಾರೆ.
ಗುರುವಾರ ಈ ಪ್ರದೇಶದಲ್ಲಿ ಡ್ರೋನ್ ಕ್ಯಾಮೆರಾವನ್ನು ಪ್ರಾರಂಭಿಸಲಾಯಿತು ಆ ವೇಳೆ ಒಟ್ಟು 11 ಪಾಕಿಸ್ತಾನಿ ದೋಣಿಗಳು ಪತ್ತೆಯಾದ್ವು ಅದರ ಆಧಾರದ ಮೇಲೆ ದೋಣಿಗಳ ಮೂಲಕ ಪಾಕಿಸ್ತಾನದಿಂದ ಭಾರತಕ್ಕೆ ಪ್ರವೇಶಿಸಿದವರ ಬೇಟೆ ಶುರುವಾಗಿದೆ. ಬಂಧಿತರನ್ನು ವಿಚಾರಣೆಗಾಗಿ ಹೆಲಿಕಾಪ್ಟರ್‌ಗಳ ಮೂಲಕ ಕಳಿಸಿಕೊಡಲಾಗಿದೆ. ಘಟನೆ ಸಂಬಂಧ 300 ಚದರ ಕಿಲೋಮೀಟರ್ ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.