National

ನಾಳೆಯಿಂದ ವಯಸ್ಕರಿಗೆ ಬೂಸ್ಟರ್‌ ಡೋಸ್‌; ಬೆಲೆಯಲ್ಲಿ ಭಾರಿ ಇಳಿಕೆ

ನವದೆಹಲಿ : ದೇಶಾದ್ಯಂತ ನಾಳೆಯಿಂದ ಎಲ್ಲ ಖಾಸಗಿ ಕೋವಿಡ್ ಲಸಿಕಾ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಕೊವಿಡ್‌ ಲಸಿಕೆ ನೀಡಲಾಗುತ್ತದೆ.  ಇದಕ್ಕಾಗಿ ಸೀರಂ ಇನ್​​​ಸ್ಟಿಟ್ಯೂಟ್​ ಆಫ್​ ಇಂಡಿಯಾ ಪ್ರತಿ ಬೂಸ್ಟರ್ ಲಸಿಕೆಗೆ 600 ರೂಪಾಯಿ ದರ ನಿಗದಿ ಮಾಡಿತ್ತು. ಆದರೆ, ಇದೀಗ ಇದರ ಬೆಲೆಯಲ್ಲಿ ಗಣನೀಯವಾದ ಇಳಿಕೆ ಮಾಡಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ಮಹತ್ವದ ಮಾತುಕತೆ ಬಳಿಕ ಕೋವಿಶೀಲ್ಡ್ ಬೂಸ್ಟರ್ ಡೋಸ್‌ ಬೆಲೆಯನ್ನು 225 ರೂಪಾಯಿಗೆ ಇಳಿಸಲಾಗಿದೆ. ಖುದ್ದಾಗಿ ಸೀರಂ ಇನ್ಸ್ಟಿಟ್ಯೂಟ್‌ನ​ ಪೂನಾವಾಲ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

Share Post