ಬಡತನದ ಹಿನ್ನೆಲೆಯಲ್ಲಿ ಸಂಕಷ್ಟ; ನವಜಾತ ಶಿಶು ಮಾರಾಟ ಮಾಡಿದ ಮಹಿಳೆ
ಮೈಸೂರು: ಬಡತನದಿಂದ ನರಳುತ್ತಿದ್ದ ತಾಯಿ ಆಗ ತಾನೆ ಜನ್ಮ ಕೊಟ್ಟ ಮಗುವನ್ನು ಮಾರಾಟ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ. ಮೈಸೂರಿನ ಹೆಚ್.ಡಿ.ಕೋಟೆಯ ವಿಶ್ವನಾಥ ಕಾಲೋನಿಯ ಎಲ್ಲಮ್ಮ ಎಂಬಾಕೆಯೇ ಮಗು ಮಾರಾಟ ಮಾಡಿದ ಮಹಿಳೆ.
ಈಗಾಗಲೇ ಎಲ್ಲಮ್ಮಳಿಗೆ ನಾಲ್ಕು ಮಕ್ಕಳಿದ್ದವು. ಇದೀಗ ಐದನೆ ಮಗು ಜನಿಸಿತ್ತು. ಈ ವೇಳೆ ಮಧ್ಯವರ್ತಿ ಮೂಲಕ ಮಗು ಮಾರಾಟ ಮಾಡಿದ್ದಾಳೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ತಮ್ಮ ಕೃತ್ಯ ಬಯಲಾಗುತ್ತದೆ ಎಂದು ಲೆಕ್ಕಾಚಾರ ಹಾಕಿದ ಚಾಲಾಕಿ ಬಸ್ ನಿಲ್ದಾಣದಲ್ಲಿ ಮಗು ಮಾರಾಟ ಮಾಡಿದ್ದಾರೆ.